Friday, May 3, 2024

ಹುಟ್ಟು ಹಬ್ಬಕ್ಕೆ ಆನ್​ಲೈನ್​ನಲ್ಲಿ ತರಿಸಿದ ಕೇಕ್​ ತಿಂದು ಮೃತಪಟ್ಟ 10 ವರ್ಷದ ಬಾಲಕಿ

ಚಂಡೀಗಢ: ಜನ್ಮದಿನದಂದು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದ ಬಳಿಕ 10 ವರ್ಷದ ಬಾಲಕಿಯೋರ್ವಳು ಸಾವನ್ನಪ್ಪಿರುವ ಘಟನೆ ಪಂಜಾಬ್‌ನಿಂದ ವರದಿಯಾಗಿದೆ.

ಪಟಿಯಾಲದಲ್ಲಿ ನೆಲೆಸಿರುವ ಕುಟುಂಬ 10 ವರ್ಷದ ಮಗಳು ಮಾನ್ವಿ ಹುಟ್ಟುಹಬ್ಬಕ್ಕೆ ಮಾರ್ಚ್ 24ರಂದು ಕುಟುಂಬದ ಸದಸ್ಯರು ಆನ್‌ಲೈನ್ ಮೂಲಕ ಕೇಕ್ ಆರ್ಡರ್ ಮಾಡಿದ್ದರು. ಹುಡುಗಿಯ ತಂಗಿ ಸೇರಿದಂತೆ ಇಡೀ ಕುಟುಂಬ ಕೇಕ್ ತಿಂದ ನಂತರ ಅಸ್ವಸ್ಥಗೊಂಡಿದ್ದರು ಎಂದು ಮೃತ ಬಾಲಕಿಯ ಅಜ್ಜ ಹೇಳಿಕೆ ನೀಡಿದ್ದು, ಪಟಿಯಾಲದ ಬೇಕರಿಯೊಂದರಿಂದ ಈ ಕೇಕ್ ಅನ್ನು ಆನ್‌ಲೈನ್‌ ಮೂಲಕ ಆರ್ಡರ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಮಾರ್ಚ್ 24ರಂದು ರಾತ್ರಿ 7 ಗಂಟೆ ಸುಮಾರಿಗೆ ಅವರು ಕೇಕ್ ಅನ್ನು ಕತ್ತರಿಸಿ, ಎಲ್ಲರಿಗೂ ಹಂಚಲಾಗಿತ್ತು. ಅದೇ ದಿನ ರಾತ್ರಿ 10 ಗಂಟೆಗೆ ಇಡೀ ಕುಟುಂಬವು ಅಸ್ವಸ್ಥಗೊಂಡಿತ್ತು. ಮರುದಿನ ಬೆಳಗ್ಗೆ ಬಾಲಕಿ ಮಾನ್ವಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಎಂದು ಆಕೆಯ ಅಜ್ಜ ಹರ್ಬನ್ ಲಾಲ್ ಹೇಳಿಕೆ ನೀಡಿದ್ದಾರೆ.

ಮನೆಗೆ ತರಿಸಲಾಗಿದ್ದ ಕೇಕ್ ಅನ್ನು ‘ಕೇಕ್ ಕನ್ಹಾ’ ಎಂಬ ಬೇಕರಿಯಿಂದ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ ಮೂಲಕ ಆರ್ಡರ್ ಮಾಡಲಾಗಿತ್ತು ಎಂದು ತಿಳಿದುಬಂದಿದ್ದು, ಚಾಕೊಲೇಟ್ ಕೇಕ್‌ನಲ್ಲಿ ವಿಷಕಾರಿ ಅಂಶವಿತ್ತು. ಇದರಿಂದಾಗಿ ಕುಟುಂಬ ಸದಸ್ಯೆಯನ್ನು ಕಳೆದುಕೊಂಡೆವು ಎಂದು ಕುಟುಂಬದವರು ಆರೋಪಿಸಿದ್ದಾರೆ.

ತಮ್ಮ ಮಗಳ ಸಾವಿಗೆ ಕೇಕ್ ಕಾರಣ ಎಂದು ಹೇಳಿರುವ ಕುಟುಂಬವು ಬೇಕರಿ ಮತ್ತು ಅದು ಮಾರಾಟ ಮಾಡುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದೆ.

ಬೇಕರಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. “ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಕೇಕ್‌ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ, ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ” ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಫುಡ್​ ಪಾಯ್ಸನ್‌ ನಿಂದಾಗಿ ಈ ದಾರುಣ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೇಕರಿ ಅಂಗಡಿ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್​ 273, 304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ.

RELATED ARTICLES

Related Articles

TRENDING ARTICLES