Friday, May 3, 2024

IPL RCB vs KKR: ತವರು ನೆಲದಲ್ಲಿ 2ನೇ ಬಾರಿ RCBಗೆ ಸೋಲು: ಕೆಕೆಆರ್​ಗೆ ಭರ್ಜರಿ ಜಯ

ಬೆಂಗಳೂರು: ತವರು ನೆಲದಲ್ಲಿ 2ನೇ ಬಾರಿ RCBಗೆ ಹೀನಾಯ ಸೋಲಾಗಿದ್ದು, ಕೋಲ್ಕತ್ತಾಗೆ ಭರ್ಜರಿ ಜಯಗಳಿಸಿದೆ.

ಹೌದು,ಬೌಲರ್‌ಗಳ ಕೆಟ್ಟ ಪ್ರದರ್ಶನದಿಂದಾಗಿ ತವರಿನಲ್ಲಿ ಆರ್‌ಸಿಬಿ ಪಂದ್ಯವನ್ನು ಸೋತಿದ್ದು ಕೋಲ್ಕತ್ತಾ ನೈಟ್‌ ರೈಡರ್ಸ್‌  7 ವಿಕೆಟ್‌ಗಳ ಜಯ ಸಾಧಿಸಿದೆ. ಸತತ ಎರಡು ಜಯ ಸಾಧಿಸುವ ಮೂಲಕ ಕೋಲ್ಕತ್ತಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

ಗೆಲ್ಲಲು 183 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ 16.5 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 186 ರನ್‌ ಹೊಡೆದು ಜಯ ಸಾಧಿಸಿತು. ಇಲ್ಲಿಯವರೆಗೆ ತವರಿನಲ್ಲಿ ನಡೆದ ಎಲ್ಲಾ 9 ಪಂದ್ಯಗಳನ್ನು ತವರಿನ ತಂಡಗಳೇ ಜಯಗಳಿಸಿದ್ದವು. ಆದರೆ ಆರ್‌ಸಿಬಿ ತವರಿನ ಎರಡನೇ ಪಂದ್ಯದಲ್ಲಿ ಎಡವಿದೆ.

 

ಆರ್​ಸಿಬಿ ಪ್ಲೇಯಿಂಗ್ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮರೂನ್ ಗ್ರೀನ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್​ವೆಲ್, ಅನೂಜ್ ರಾವತ್ (ವಿಕೆಟ್​ ಕೀಪರ್​), ದಿನೇಶ್ ಕಾರ್ತಿಕ್, ರೀಸ್ ಟೋಪ್ಲಿ/ಲಾಕಿ ಫರ್ಗ್ಯುಸನ್, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ಫಿಲ್ ಸಾಲ್ಟ್ (ವಿಕೆಟ್ ಕೀಪರ್​), ಸುನಿಲ್ ನರೈನ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.

RELATED ARTICLES

Related Articles

TRENDING ARTICLES