Sunday, April 28, 2024

IPL 2024 RCB VS KKR : ಟಾಸ್​ ಸೋತ RCB ಬ್ಯಾಟಿಂಗ್​ಗೆ ಆಯ್ಕೆ

ಬೆಂಗಳೂರು: ಇಂದು ಆರ್​​ಸಿಬಿ ಮತ್ತು ಕೆಕೆಆರ್​​ ತಂಡಗಳು ಮುಖಾಮುಖಿವೆ. ಟಾಸ್​ ಗೆದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನ ನೀಡಲಾಗಿದೆ. ಐಪಿಎಲ್‌ 2024 ಆವೃತ್ತಿಯು 10ನೇ ಹೈವೋಲ್ಟೇಜ್ ಪಂದ್ಯ ಇದಾಗಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಹೈವೋಲ್ಟೇಜ್ ಪಂದ್ಯ ಸಾಕ್ಷಿಯಾಗಲಿದೆ.

ಕೊನೆಯ ಪಂದ್ಯ ಗೆದ್ದಿರುವ ಆರ್​ಸಿಬಿ, ಸತತ ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ ಕೆಕೆಆರ್​ ಆಡಿದ ಮೊದಲ ಪಂದ್ಯದಲ್ಲೇ ಜಯದ ನಗೆ ಬೀರಿದ್ದು ಅದೇ ಲಯ ಮುಂದುವರೆಸಲು ಸಜ್ಜಾಗಿದೆ. ಬ್ಯಾಟಿಂಗ್​ಗೆ ನೆರವಾಗಿರುವ ಬೆಂಗಳೂರು ಪಿಚ್​​ನಲ್ಲಿ ಹೈಸ್ಕೋರಿಂಗ್ ಗೇಮ್ ಅನ್ನು ನಿರೀಕ್ಷಿಸಲಾಗಿದೆ.

ಆರ್​ಸಿಬಿ ಪ್ಲೇಯಿಂಗ್ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮರೂನ್ ಗ್ರೀನ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್​ವೆಲ್, ಅನೂಜ್ ರಾವತ್ (ವಿಕೆಟ್​ ಕೀಪರ್​), ದಿನೇಶ್ ಕಾರ್ತಿಕ್, ರೀಸ್ ಟೋಪ್ಲಿ/ಲಾಕಿ ಫರ್ಗ್ಯುಸನ್, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ಫಿಲ್ ಸಾಲ್ಟ್ (ವಿಕೆಟ್ ಕೀಪರ್​), ಸುನಿಲ್ ನರೈನ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.

 

RELATED ARTICLES

Related Articles

TRENDING ARTICLES