Monday, May 13, 2024

RCBಗೆ 201 ರನ್​ ಬೃಹತ್ ಟಾರ್ಗೆಟ್ ನೀಡಿದ ಗುಜರಾತ್ : RCB ಗೆಲ್ಲುತ್ತಾ? ಕಾಮೆಂಟ್ ಮಾಡಿ

ಬೆಂಗಳೂರು : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡ ಬೃಹತ್ ಮೊತ್ತ ಪೇರಿಸಿತು.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಟೈಟಾನ್ಸ್​ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್​ ಕಲೆಹಾಕಿತು.

ಇನ್ನಿಂಗ್ಸ್​ ಆರಂಭಿಸಿದ ಗುಜರಾತ್​ ಟೈಟಾನ್ಸ್​ಗೆ ಉತ್ತಮ ಆರಂಭ ಸಿಗಲಿಲ್ಲ. ವೃದ್ಧಿಮಾನ್ ಸಹಾ 5 ರನ್​ ಗಳಿಸಿ ಸ್ವಪ್ನಿಲ್ ಸಿಂಗ್​ಗೆ ವಿಕೆಟ್ ಒಪ್ಪಿಸಿದರು. ನಾಯಕ ಶುಭ್​ಮನ್ ಗಿಲ್ 16 ರನ್​ ಗಳಿಸಿ ಮ್ಯಾಕ್ಸ್​ವೆಲ್​ಗೆ ವಿಕೆಟ್ ನೀಡಿದರು.

ಸಂಕಷ್ಟಕ್ಕೆ ಸಿಲುಕಿದ ಸಾಯಿ ಸುದರ್ಶನ್ ಹಾಗೂ ಶಾರುಖ್ ಖಾನ್ ಆಸರೆಯಾದರು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬೌಲರ್​ಗಳನ್ನು ಈ ಜೋಡಿ ಸಮರ್ಥವಾಗಿ ಎದುರಿಸಿದರು. ಶಾರುಖ್ ಖಾನ್ 30 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 3 ಬೌಂಡರಿಗಳೊಂದಿಗೆ 58 ರನ್​ ಸಿಡಿಸಿದರು. ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಕ್ಲೀನ್​ಬೌಲ್ಡ್​ ಆದರು.

ಬಳಿಕ ಒಂದಾದ ಸಾಯಿ ಸುದರ್ಶನ್ ಹಾಗೂ ಡೇವಿಡ್ ಮಿಲ್ಲರ್ ಗುಜರಾತ್ ರನ್​ ವೇಗವನ್ನು ಹೆಚ್ಚಿಸಿದರು. ಇನ್ನಿಂಗ್ಸ್​ನ ಕೊನೆಯ ವರೆಗೂ ಏಕಾಂಗಿಯಾಗಿ ಹೋರಾಡಿದ ಸಾಯಿ ಸುದರ್ಶನ್ 49 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 84 ರನ್​ ಸಿಡಿಸಿದರು. ಡೇವಿಡ್ ಮಿಲ್ಲರ್ ಅಜೇಯ 26 ರನ್ ಗಳಿಸಿದರು.

ಆರ್​​ಸಿಬಿ ಪರ ಸ್ವಪ್ನಿಲ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು. ಮೂರು ಓವರ್​ ಬೌಲ್ ಮಾಡಿದ ಕ್ಯಾಮೆರಾನ್ ಗ್ರೀನ್ 42 ರನ್​ ಬಿಟ್ಟುಕೊಟ್ಟು ದುಬಾರಿಯಾದರು. ಆರ್​ಸಿಬಿ ಗೆಲ್ಲಲು 201 ರನ್​ ಗಳಿಸಬೇಕಿದೆ.

RELATED ARTICLES

Related Articles

TRENDING ARTICLES