Monday, May 13, 2024

ವಿಲ್ ಜಾಕ್ಸ್ ಸ್ಫೋಟಕ ಶತಕ : ಗುಜರಾತ್ ವಿರುದ್ಧ RCBಗೆ ಭರ್ಜರಿ ಗೆಲುವು

ಬೆಂಗಳೂರು : ವಿಲ್​ ಜಾಕ್ಸ್​ ಸ್ಫೋಟಕ ಶತಕದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 9 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಟೈಟಾನ್ಸ್​ 200 ರನ್​ ಗಳಿಸಿತು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, 16 ಓವರ್​ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ಟೂರ್ನಿಯಲ್ಲಿ ಮೂರನೇ ಜಯ ದಾಖಲಿಸಿತು.

ಇನ್ನಿಂಗ್ಸ್ ಆರಂಭಿಸಿದ ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಉತ್ತಮ ಆರಂಭ ನೀಡಿದರು. ಫಾಫ್ ಡು ಪ್ಲೆಸಿಸ್ 24 ರನ್​ ಗಳಿಸಿ ಔಟಾದರು. ಬಳಿಕ ಜೊತೆಯಾದ ಕಿಂಗ್ ಕೊಹ್ಲಿ ಹಾಗೂ ವಿಲ್ ಜಾಕ್ಸ್ ಗುಜರಾತ್ ಬೌಲರ್​​ಗಳ ಬೆವರಿಳಿಸಿದರು. ಒಂದೆಡೆ ವಿರಾಟ್ ಅಬ್ಬರಿಸುತ್ತಿದ್ದಾಗ ಜಾಕ್ಸ್​ ಉತ್ತಮ ಸಾಥ್ ನೀಡಿದರು. ಕೊನೆಯಲ್ಲಿ ವಿಲ್​ ಜಾಕ್ಸ್​ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶಿಸಿದರು.

ವಿಲ್ ಜಾಕ್ಸ್ 41 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 100* (ಶತಕ) ರನ್​ ಸಿಡಿಸಿದರು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 70 ರನ್​ ಸಿಡಿಸಿದರು. ಈ ಜೋಡೆ ಸುಲಭವಾಗಿ ಆರ್​ಸಿಬಿಯನ್ನು ಗೆಲುವಿನ ದಡ ಸೇರಿಸಿತು. ಗುಜರಾತ್ ಪರ ಸಾಯಿ ಕಿಶೋರ್ ಒಂದು ವಿಕೆಟ್ ಪಡೆದರು. ರಶೀದ್ ಖಾನ್ 51, ನೂರ್ ಅಹಮ್ಮದ್ 43 ಹಾಗೂ ಮೋಹಿತ್ ಶರ್ಮಾ ಕೇವಲ 2 ಓವರ್​ಗಳಲ್ಲಿ 41 ರನ್​ ನೀಡಿ ಕೆಟ್ಟ ದಾಖಲೆ ಬರೆದರು.

RELATED ARTICLES

Related Articles

TRENDING ARTICLES