Saturday, April 27, 2024

ತಿಂಗಳಿಗೆ 4 ಕೋಟಿ ಆದಾಯ ಘೋಷಣೆಯಲ್ಲೆ ಗೊತ್ತಾಗಿದೆ ಯಾರು ಪ್ರಾಮಾಣಿಕರು ಅಂತ: ಸಿಪಿ ಯೋಗೇಶ್ವರ್​

ರಾಮನಗರ : ವೈಟ್ ಕಾಲರ್ ವ್ಯಕ್ತಿ ಬೇಕೋ, ಜನರ ಕಷ್ಟಕ್ಕೆ ಸ್ಪಂದಿಸೋ ವ್ಯಕ್ತಿ ಬೇಕೋ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ಸಂಸದ ಡಿಕೆ ಸುರೇಶ್​ ತಮ್ಮ ನಾಮಪತ್ರ ಸಲ್ಲಿಕೆ ಬಳಿಕ ಬಹಿರಂಗ ಸಭೆಯಲ್ಲಿ ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಅವರನ್ನುದ್ದೇಶಿಸಿ ವೈಟ್​ ಕಾಲರ್​ ವ್ಯಕ್ತಿ ಬೇಕೋ, ಜನರ ಕಷ್ಟಕ್ಕೆ ಸ್ಪಂದಿಸೋ ವ್ಯಕ್ತಿ ಬೇಕೋ ಎಂಬ ಹೇಳಿಕೆಯನ್ನು ನೀಡಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ : ಬಿ.ಎಸ್​ ಯಡಿಯೂರಪ್ಪ

ಈ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರು ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೈತ್ರಿ ಮುಖಂಡರ ಸಭೆಯ ಬಳಿಕ ಮಾದ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದರು. ಕಳೆದ 12 ವರ್ಷಗಳ ಹಿಂದೆ ಡಿ.ಕೆ.ಸುರೇಶ್ ಮೊದಲ ಬಾರಿ ನಾಮಪತ್ರ ಸಲ್ಲಿಸಿದಾಗ ಅವರ ಆದಾಯ ಎಷ್ಟಿತ್ತು.? ಈಗ ಅವರ ಆದಾಯ ಎಷ್ಟಿದೆ.? ನೆನ್ನೆ ಸುಮಾರು 600ಕೋಟಿ ಆದಾಯ ಘೋಷಣೆ ಮಾಡಿಕೊಂಡಿದ್ದಾರೆ. ತಿಂಗಳಿಗೆ 4ಕೋಟಿ ಸಂಪಾದನೆ ಅಂತ ತೋರಿಸಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ಪ್ರಾಮಾಣಿಕವಾಗಿ ಯಾರು ಕೆಲಸ ಮಾಡಿದ್ದಾರೆ. ವೈಟ್ ಕಾಲರ್ ಬಂದ್ರೆ ಏನು ಪ್ರಯೋಜನ ಅಂತ ಜನ ತೀರ್ಮಾನ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದರು.

ಈ ವೇಳೆ ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಸೇರಿದಂತೆ ಸ್ಥಳೀಯ ಜೆಡಿಎಸ್ – ಬಿಜೆಪಿ ಮುಖಂಡರು ಇದ್ದರು.

RELATED ARTICLES

Related Articles

TRENDING ARTICLES