Thursday, May 9, 2024

ಕೇಂದ್ರದಿಂದ ಬರ ಪರಿಹಾರ ಹಣ ಘೋಷಣೆ : ರಾಜ್ಯ ಕಾನೂನು ಹೋರಾಟಕ್ಕೆ ಸಿಕ್ಕ ಜಯ- ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಪರಿಹಾರ ಹಣ ಘೋಷಣೆಯಾದ ಬೆನ್ನಲ್ಲೇ ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಹಣ ಬಿಡುಗಡೆ ಕರ್ನಾಟಕ ಕಾನೂನು ಹೋರಾಟಕ್ಕೆ ಸಂದ ಜಯ, ಅವರ ಬಳಿ ಸಮಯ ಇದ್ದಾಗ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೆ ಅವಕಾಶ ತಗೆದುಕೊಂಡಿಲ್ಲ, ನಾಲ್ಕು ತಿಂಗಳುಗಳ ಕಾಲ ನಾವು ನೀಡಿದ ಮನವಿ ಪತ್ರದ ಮೇಲೆ ಕೂತಿದ್ದರು, ಕರ್ನಾಟಕದ ಹಕ್ಕಿಗೆ ಯಾವುದೇ ಬೆಲೆಯನ್ನೂ ಕೊಡಲಿಲ್ಲ ಅವರ ಕೈನಲ್ಲಿ ತೀರ್ಮಾನ ಇದ್ದಾಗ ರಾಜ್ಯಕ್ಕೆ ಕೊಡಬಾರದು ಅನ್ನೋ ಧೊರಣೆ ಹೊಂದಿದ್ದರು.

ಇದನ್ನೂ ಓದಿ: ಸೋಮವಾರದ ಒಳಗೆ ರಾಜ್ಯದ ಬರ ಪರಿಹಾರ ಹಣ ಬಿಡುಗಡೆ!

ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಹಣ ಬಿಡುಗಡೆ ಮಾಡಬೇಕಿತ್ತು. ಬಿಡುಗಡೆ ಮಾಡದ ಕಾರಣ ನಾವು ಕೇಂದ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಅನಿವಾರ್ಯತೆ ಎದುರಾಯಿತು. ಕೋರ್ಟ್ ನಲ್ಲಿ ಎರಡು ಬಾರಿ ಇಯರಿಂಗ್ ಆಗಿದೆ, ನಾವು ಕೊಟ್ಟಿರುವ ಎಲ್ಲ ದಾಖಲೆಗಳು ಕ್ರಮಬದ್ಧವಾಗಿತ್ತು ಅದಕ್ಕೆ‌ ಹೆಚ್ಚು ಚರ್ಚೆ ಆಗಲಿಲ್ಲ. ವಾದ ಬೇಡ ಅಂತ‌ ಕೇಂದ್ರದ ಪರ ವಕೀಲರು ಮನವಿ ಮಾಡಿದ್ದಾರೆ. ರಾಜ್ಯ‌ ಸರ್ಕಾರದ ಟೈಂ ಲೈನನ್ನ ಎಲ್ಲೂ ಪ್ರಶ್ನೆ ಮಾಡಲಿಲ್ಲ ಅವರ ವಕೀಲರ ನಿಲುವೇ ಇದಕ್ಕೆ ಸಾಕ್ಷಿ, ಕರ್ನಾಟಕದ ಕಾನೂನು ಹೋರಾಟಕ್ಕೆ ಸಂದ ಜಯ ಎನ್ನಬಹುದು ಎಂದರು.

ಇದನ್ನೂ ಓದಿ: ಬರ ಪರಿಹಾರ ಶೀಘ್ರ ಬಿಡುಗಡೆಗೊಳಿಸುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಮನವಿ!

ಪರಿಹಾರ ಹಣಕ್ಕಾಗಿ ಕೋರ್ಟ್ ಗೆ ಹೋಗುವ ಪ್ರಸಂಗ ಬರಬಾರದು, ದೇಶದಲ್ಲೇ ಕರ್ನಾಟಕ ಹೆಚ್ಚು ತೆರಿಗೆ ಕಟ್ಟುತ್ತೆ, ನಮಗೆ ಕೇಂದ್ರ ನಿರಂತರವಾಗಿ ವಂಚನೆ ಮಾಡುತ್ತಾ ಬಂದಿದೆ, ಇದು ಒಂದು ಹಂತದ ಜಯ ಸಿಕ್ಕಿದ ಹಾಗೆ, 25% ಕೂಡ ಬರ ಪರಿಹಾರದ ಹಣ ಕೊಡದೆ ಅನ್ಯಾಯ ಮಾಡಿದ್ದಾರೆ. ಭೀಕರ ಬರಗಾಲ ಇದ್ದರೂ ಕರ್ನಾಟಕಕ್ಕೆ ಕೇಂದ್ರ ಕೇಳಿದಷ್ಟು ಪರಿಹಾರ ಕೊಡಲಿಲ್ಲ, ಈಗ ಘೋಷಣೆ ಮಾಡಿರುವ ಹಣ ಇನ್ನೂ ನಮ್ಮ‌ ಅಕೌಂಟ್ ಗೆ ಬಂದಿಲ್ಲ ಬರುತ್ತೆ ಎನ್ನುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES