Wednesday, May 8, 2024

ಇವಿಎಂ ಯಂತ್ರಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಲಾರಿ ಟೈರ್​ ಬ್ಲಾಸ್ಟ್​: ಸ್ಥಳದಲ್ಲೆ ಟಿಕಾಣಿ ಹೂಡಿದ ತಹಶಿಲ್ದಾರ್​

ಕೋಲಾರ: ಲೋಕಸಭಾ ಚುನಾವಣೆಗೆ ಬಳಸಲಾಗಿದ್ದ ಇವಿಎಂ‌ ಮೆಷಿನ್​ಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಪೋಟಗೊಂಡಿರುವ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.

ಮುಳಬಾಗಿಲಿನಿಂದ ಕೋಲಾರದ‌ ಸ್ಟ್ರಾಂಗ್ ರೂಂಗೆ ಇವಿಎಂ ಸಾಗಿಸಲಾಗುತ್ತಿತ್ತು. ಈ ವೇಳೆ ಕೋಲಾರ ತಾಲೂಕು ವಡಗೂರ್ ಗೇಟ್ ಬಳಿ ಟೈರ್ ‌ಬ್ಲಾಸ್ಟ್ ಆಗಿದೆ. ಪರಿಣಾಮ ಸುಮಾರು 1 ಗಂಟೆಗಳ ಕಾಲ ವಾಹನ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ.
ಕ್ಯಾಂಟರ್ ಸೀಲ್ ಮಾಡಿರುವುದರಿಂದ‌ ವಾಹನ ರಿಪೇರಿಯಾದ‌ ನಂತರ ಸ್ಟ್ರಾಂಗ್ ರೂಂ‌ಗೆ ರವಾನೆ ಮಾಡಲಾಗಿದೆ. ವಾಹನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ತಹಶಿಲ್ದಾರ್ ಹಾಗೂ ಪೊಲೀಸ್ ‌ಸಿಬ್ಬಂದಿ ಸ್ಥಳದಲ್ಲೇ‌ ಮೊಕ್ಕಾಂ‌ ಹೂಡಿದ್ದರು.

RELATED ARTICLES

Related Articles

TRENDING ARTICLES