Saturday, May 4, 2024

ಸವದತ್ತಿ ಯಲ್ಲಮ್ಮ ದೇಗುಲದಲ್ಲಿ 11 ಕೋಟಿ ರೂ. ಕಾಣಿಕೆ ಸಂಗ್ರಹ!

ಬೆಂಗಳೂರು : ಕುಂದಾ ನಗರಿ ಬೆಳಗಾವಿ ಸೇರಿ ರಾಜ್ಯದ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೃಷಿ ಚುಟುವಟಿಕೆ ಬಿಡಿ, ಕುಡಿಯಲು ಕೂಡ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿ ಮಧ್ಯೆಯೂ ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿರುವ ಯಲ್ಲಮ್ಮ ದೇವಿ ದೇವಾಲಯಕ್ಕೆ ಭರಪೂರ ಕಾಣಿಕೆ ಹರಿದುಬಂದಿದೆ.

ದೇವಾಲಯದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, ಒಂದೇ ವರ್ಷದಲ್ಲಿ 11 ಕೋಟಿ ರೂ. ಕಾಣಿಗೆ ಸಂಗ್ರಹವಾಗಿದೆ. ಬರಗಾಲದ ಮಧ್ಯೆಯೂ ದೇವಾಲಯದ ಹುಂಡಿಯಲ್ಲಿ 2023-24ನೇ ಸಾಲಿನಲ್ಲಿ 11.23 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನಗದು, ಚಿನ್ನ, ಬೆಳ್ಳಿಯ ಆಭರಣಗಳನ್ನು ಹುಂಡಿಗೆ ಹಾಕಿ ಭಕ್ತಿ ಮೆರೆಯುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 2.4 ಕೋಟಿ ರೂ. ಹೆಚ್ಚಿನ ಕಾಣಿಕೆ ಸಂಗ್ರಹವಾಗಿದೆ. ದೇವಾಲಯದ ಹುಂಡಿಯಲ್ಲಿ 2022–23ರಲ್ಲಿ 8.01 ಕೋಟಿ ರೂ. ನಗದು, 66.28 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 15.43 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಸೇರಿ ಒಟ್ಟು 8.83 ಕೋಟಿಯ ಕಾಣಿಕೆ ಸಂಗ್ರಹವಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ : ಬಿ.ಎಸ್​ ಯಡಿಯೂರಪ್ಪ

ಇನ್ನು 2023–24ರಲ್ಲಿ ತೀವ್ರ ಬರಗಾಲದ ಮಧ್ಯೆಯೂ 10.22 ಕೋಟಿ ರೂ. ನಗದು, 84.14 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 16.65 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಸೇರಿ 11.23 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಜತೆಗೆ ಕೆನಡಾ ದೇಶದ ಎರಡು ಕರೆನ್ಸಿ ನೋಟುಗಳು ಕೂಡ ಪತ್ತೆಯಾಗಿವೆ.

RELATED ARTICLES

Related Articles

TRENDING ARTICLES