Saturday, April 27, 2024

ಕೋಲಾರ ಕ್ಷೇತ್ರದ ಟಿಕೆಟ್​ ಸಿಗುವ ಆಶಾಭಾವನೆ ಇದೆ: ಸಚಿವ ಕೆ.ಹೆಚ್​ ಮುನಿಯಪ್ಪ

ಬೆಂಗಳೂರು : ನಿನ್ನೆ ನಡೆದ ಘಟನೆಗಳ ರೂವಾರಿ ಯಾರೆಂದು ಮಾಧ್ಯಮದವರೇ ನನಗೆ ತಿಳಿಸಬೇಕು. ನನಗಂತೂ ದಿಗ್ ಬ್ರಮೆಯಾಗಿದೆ. ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಬುಧವಾರ ನಡೆದ ರಾಜೀನಾಮೆಯ ಪ್ರಸಂಗದ ಕುರಿತು ಚರ್ಚಿಸಲಿದ್ದೇನೆ ಟಿಕೆಟ್ ನಮ್ಮ ಕುಟುಂಬಕ್ಕೆ ಸುಗುವ ಆಶಾಭಾವನೆ ಇದೆ ಎಂದು ಆಹಾರ ಸಚಿವ ಕೆ.ಹೆಚ್​ ಮುನಿಯಪ್ಪ ತಿಳಿಸಿದರು.

ಈ ಕುರಿತು ನಗರದಲ್ಲಿ ಮಾತನಾಡಿ ಅವರು, ನಿನ್ನೆ ನಡೆದ ರಾಜೀನಾಮೆ ಪ್ರಹಸನ ಘಟನೆಗಳು ನನಗಂತೂ ದಿಗ್ ಬ್ರಮೆಯಾಗಿದೆ. ಕಾಂಗ್ರೆಸ್‌ನ ಹೈಕಮಾಂಡ್ ನೀಡುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧನಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.

ಇದನ್ನೂ ಓದಿ: ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ ಅಥವಾ ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ: ಸಿದ್ದರಾಮಯ್ಯ

ನಾನು ಕೇಂದ್ರ ಮಟ್ಟದಲ್ಲಿ ರಾಜಕಾರಣ  ಮಾಡಿರುವ ನಾಯಕ , ಕಾಂಗ್ರೆಸ್ ಪಕ್ಷವು ಕುಟುಂಬದ ಹಲವರಿಗೆ ಟಿಕೆಟ್ ನೀಡಿರುವುದುರಿಂದ ಸಹಜವಾಗಿಯೇ ನಾನೂ ನನ್ನ ಕುಟುಂಬಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ, ದೊರೆಯುವ ಆಶಾ ಭಾವನೆಯಿಂದಿದ್ದು, ನಾನು ಕೋಲಾರ ಲೋಕಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರವರಿಗೆ ನೀಡಿದ್ದೇನೆ.

ಮಂತ್ರಿಗಳಿಗಳ ಜೊತೆ ಇಂದು ಸಂಜೆ ಭೇಟಿ ನೀಡಿ ಚರ್ಚಿಸುತ್ತೇನೆ, ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಗೆಲುವು ಕಾಂಗ್ರೆಸ್ ಪಕ್ಷದ್ದಾಗಿರಬೇಕೇ ವಿನ: ವ್ಯಕ್ತಿ ಪ್ರತಿಷ್ಠೆಯಿಂದ ಕೂಡಿರಬಾರದು. ನಾವೇಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಅಧ್ಯ ಕರ್ತವ್ಯವಾಗಿದೆ.

ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ ಈ ಜಗಳ ಹಾಗೂ ಮನಸ್ಥಾಪಗಳನ್ನು ನಮ್ಮ ಹಂತದಲ್ಲಿಯೇ ಬಗೆಹರಿಸಿಕೊಂಡು ಮುನ್ನಡೆಯಬೇಕಾಗಿದೆ ಈ ರೀತಿಯಲ್ಲಿ ರಾಜೀನಾಮೆ ನೀಡುವ ಹಂತಕ್ಕೆ ಯಾವ ಕಾರಣದಿಂದ ಹೋದರು ಎಂಬುವುದು ಕುತೂಹಲಕರವಾಗಿದೆ ಸಂಜೆ ವರಗೂ ಕಾದು ನೋಡಿ ಎಲ್ಲವೂ ಗೊತ್ತಾಗಲಿದೆ ಎಂದರು.

RELATED ARTICLES

Related Articles

TRENDING ARTICLES