Thursday, May 9, 2024

ಹೆಲಿಕಾಪ್ಟರ್​ ಸೀಟ್​ನಿಂದ ಜಾರಿ ಬಿದ್ದ ​ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಅವರು ಹೆಲಿಕಾಪ್ಟರ್​ ಸೀಟ್​ ಮೇಲೆ ಕುಳಿತುಕೊಳ್ಳುವ ವೇಳೆ ಜಾರಿ ಬಿದ್ದ ಘಟನೆ ಪಶ್ಚಿಮ್ ಬರ್ಧಮಾನ್​ನ ದುರ್ಗಾಪುರದಲ್ಲಿ ನಡೆದಿದೆ.

ಸದ್ಯ ಆಕೆಗೆ ಸಣ್ಣಪುಟ್ಟ ಗಾಯವಾಗಿದ್ದು ಈ ವೇಳೆ ಅವರ ಭದ್ರತಾ ಸಿಬ್ಬಂದಿಗಳು ಸಹಾಯ ಮಾಡಿದ್ದಾರೆ. ಈ ನಡುವೆಯೂ ಅವರು ಅಸನ್ಸೋಲ್​ನತ್ತ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: ಕೇಂದ್ರದಿಂದ ಬರ ಪರಿಹಾರ ಹಣ ಘೋಷಣೆ : ರಾಜ್ಯ ಕಾನೂನು ಹೋರಾಟಕ್ಕೆ ಸಿಕ್ಕ ಜಯ- ಸಚಿವ ಕೃಷ್ಣ ಭೈರೇಗೌಡ

ಲೋಕಸಭಾ ಚುನಾವಣೆ ಹಿನ್ನೆಲೆ ಪಶ್ಚಿಮ ಬಂಗಾಳ ರಾಜ್ಯಾದ್ಯಂತ ಟಿಎಂಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿರುವ ವೆಸ್ಟ್​ ಬೆಂಗಾಲ್​ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಇಂದು ದುರಗಾಪುರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಹೆಲಿಕಾಪ್ಟರ್​ ಹತ್ತಿ ತಮ್ಮ ಆಸನದಲ್ಲಿ ಕೂರುವ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಕೂಡಲೆ ಅವರ ಭದ್ರಾ ಸಿಬ್ಬಂದಿ ಅವರ ರಕ್ಷಣೆಗೆ ದಾವಿಸಿದ್ದಾರೆ.

ಕಳೆದ ತಿಂಗಳಷ್ಟೆ ತಮ್ಮ ಮನೆಯಲ್ಲಿ ಲಿವಿಂಗ್ ರೂಂನಲ್ಲಿ ಓಡಾಡುವಾಗ ಕಾಲು ಜಾರಿ ಬಿದ್ದಿದ್ದ ಮಮತಾ ಬ್ಯಾನರ್ಜಿ, ತಮ್ಮ ಹಣೆಗೆ ಪೆಟ್ಟು ರಕ್ತ ಸ್ತಾವವಾಗಿತ್ತು.

 

RELATED ARTICLES

Related Articles

TRENDING ARTICLES