Friday, May 10, 2024

ನಾಳೆಯಿಂದ ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು : ರಾಜ್ಯದಲ್ಲಿ ಲೋಕಸಭಾ ಮತ ಸಮರಕ್ಕೆ ನಾಳೆಯಿಂದ ಅಧಿಕೃತ ಚಾಲನೆ ಸಿಗಲಿದೆ. ಒಟ್ಟು ಎರಡು ಹಂತಗಳಲ್ಲಿ ನಡೆಯುವ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 8 ರಂದು ನಾಮಪತ್ರ (ಉಮೇದುವಾರಿಕೆ) ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಎರಡನೇ ಹಂತದ ಮತದಾದನ ಮೇ 7 ರಂದು ನಡೆಯಲಿದೆ. ಜೂನ್​ 4 ರಂದು ಮತ ಎಣಿಕೆ (ಫಲಿತಾಂಶ) ಪ್ರಕಟವಾಗಲಿದೆ.

.26ರಂದು ಜಿಲ್ಲೆಗಳಲ್ಲಿ ಮತದಾನ

ರಾಜ್ಯದಲ್ಲಿ ಏಪ್ರಿಲ್​ 26 ರಂದು ಮೊದಲ ಹಂತದಲ್ಲಿ 14 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರದಲ್ಲಿ ಚುನಾವಣೆ ನಡೆಯಲಿದೆ.

ತಪ್ಪದೇ ತಮ್ಮ ಹಕ್ಕು ಚಲಾಯಿಸಬೇಕು

‘ಈ ಬಾರಿ ಇಡೀ ವಿಶ್ವವೇ ದೇಶದ ಚುನಾವಣೆಯತ್ತ ನೋಡುತ್ತಿದೆ. 2024ರಲ್ಲಿ ಭಾರತದ ಜೊತೆ ಜಗತ್ತಿನ ಹಲವು ದೇಶಗಳಲ್ಲಿ ಚುನಾವಣೆ ನಡೆಯಲಿದೆ. ಆದ್ದರಿಂದಲೇ ಈ ವರ್ಷ ಚುನಾವಣಾ ವರ್ಷ ಎನ್ನಬಹುದು. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಎಲ್ಲಾ ಮತದಾರರು ತಪ್ಪದೇ ತಮ್ಮ ಹಕ್ಕು ಚಲಾಯಿಸಬೇಕು’ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣಾ ವೇಳಾಪಟ್ಟಿ

ಮೊದಲ ಹಂತ

ಚುನಾವಣೆ ಘೋಷಣೆ : ಮಾರ್ಚ್‌ 16, 2024

ಅಧಿಸೂಚನೆ ಪ್ರಕಟ : ಮಾರ್ಚ್‌ 28, 2024

ನಾಮಪತ್ರ ಸಲ್ಲಿಕೆಗೆ ಕೊನೆ ದಿನ : ಏಪ್ರಿಲ್‌ 04, 2024

ನಾಮಪತ್ರ ಪರಿಶೀಲನೆ : ಏಪ್ರಿಲ್‌ 05, 2024

ನಾಮಪತ್ರ ವಾಪಸ್‌ಗೆ ಕೊನೆ ದಿನ : ಏಪ್ರಿಲ್‌ 08, 2024

ಮತದಾನ : ಏಪ್ರಿಲ್‌ 26, 2024

ಫಲಿತಾಂಶ : ಜೂನ್‌ 4, 2024

ಎರಡನೇ ಹಂತ

ಚುನಾವಣೆ ಘೋಷಣೆ : ಮಾರ್ಚ್‌ 16, 2024

ಅಧಿಸೂಚನೆ ಪ್ರಕಟ : ಏಪ್ರಿಲ್‌ 12, 2024

ನಾಮಪತ್ರ ಸಲ್ಲಿಕೆಗೆ ಕೊನೆ ದಿನ : ಏಪ್ರಿಲ್‌ 19, 2024

ನಾಮಪತ್ರ ಪರಿಶೀಲನೆ : ಏಪ್ರಿಲ್‌ 20, 2024

ನಾಮಪತ್ರ ವಾಪಸ್‌ಗೆ ಕೊನೆ ದಿನ : ಏಪ್ರಿಲ್‌ 22, 2024

ಮತದಾನ : ಮೇ 7, 2024

ಫಲಿತಾಂಶ : ಜೂನ್‌ 4, 2024

RELATED ARTICLES

Related Articles

TRENDING ARTICLES