Friday, May 10, 2024

ನಾಳೆ ಹುಣ್ಣಿಮೆ ಕನ್ಯಾ ರಾಶಿಯವರು ಈ ರೀತಿ ಮಾಡಿ ಒಳಿತಾಗುತ್ತದೆ

ನಾಳೆ ಹುಣ್ಣಿಮೆ ಈ ದಿನ ಕನ್ಯಾರಾಶಿಯವರು ಏನೆಲ್ಲಾ ಮಾಡಬೇಕುಎಂದು ಸಿದ್ದಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಮಾಹಿತಿ ನೀಡಿದ್ದಾರೆ.  

ಕನ್ಯಾ ರಾಶಿಯವರು ಅಕ್ಕಿ, ಉದ್ದಿನ ಬೇಳೆ, ಹುರುಳಿ ಕಾಳು, ಬಿಳಿಯ ವಸ್ತ್ರ ಮತ್ತು ತಾಂಬೂಲಾದಿಗಳ ಸಹಿತ ನಿಮ್ಮ ಕುಲದೇವರಲ್ಲಿ ಪ್ರಾರ್ಥಿಸಿ, ನಿಮ್ಮ ಗುರುದೇವರಿಗೆ ಸಮರ್ಪಿಸಿದ್ದಾರೆ ನಿಮಗೆ ಒಳಿತಾಗುತ್ತದೆ.

ರೈತರು ಈ ಹುಣ್ಣಿಮೆಯಂದು ಏನು ಮಾಡಬೇಕು..?

ರೈತರುಗಳು ಈ ಹುಣ್ಣಿಮೆಯಂದು ಸಂಜೆಯ ವೇಳೆ, ತಮ್ಮ ಹೊಲಗಳಲ್ಲಿ, ಕೂಷ್ಮಾಂಡ ಬಲಿಯನ್ನು ಮಾಡಿ, ಮೊಸರನ್ನವನ್ನು ನೈವೇದ್ಯ ಮಾಡಿ. ಇದರಿಂದ ಫಸಲುಗಳು ಸಮೃದ್ಧಿಯಾಗಿ ಬರುತ್ತದೆ. ಕ್ಷೇತ್ರದೇವತೆಯಾದ ಇಷ್ಟಕಾಮೇಶ್ವರಿಯಲ್ಲಿ ಹರಕೆ ಮಾಡಿಕೊಳ್ಳಿ ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯದನ್ನೇ ಮಾಡಿ, ನಿಮಗೂ ಒಳಿತಾಗುತ್ತದೆ. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES