Friday, May 10, 2024

ಸಿದ್ದರಾಮಯ್ಯನವರಿಗೆ ಧಮ್ ಇದ್ರೆ ಬರ ಪರಿಹಾರ ನಮಗೆ ಕೇಳಲಿ: ಆರ್​.ಅಶೋಕ್​

ಕಲಬುರಗಿ: ಸಿದ್ದರಾಮಯ್ಯನವರಿಗೆ ಧಮ್ ಇದ್ರೆ ಬರ ಪರಿಹಾರ ನಮಗೆ ಕೇಳಲಿ ಎಂದು ವಿಪಕ್ಷನಾಯಕ ಆರ್.ಅಶೋಕ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೋದಿಯವರ ಹವಾದಲ್ಲಿ ಎಲ್ಲರೂ ಗೆಲುವಂತೆ ಮಾಡುತ್ತದೆ. ನಮಲ್ಲಿ ಬಹಳಷ್ಟು ಜನ ಆರ್ಜಿ ಹಾಕಿದ್ದರು‌ ಕೊನೆಗು ನಮ್ಮ ಹೈಕಮಾಂಡ್ ಟಿಕೆಟ್ ಅಂತಿಮ ಮಾಡಿದ್ದಾರೆ ಎಂದು ಹೇಳಿದ್ದರು.

ಬೀದರ್‌ನಲ್ಲಿ ನಾವು ಗೆದ್ದೆ ಗೆಲುತ್ತೇವೆ

ಬೀದರ್ ನಲ್ಲೂ ಸಾಕಷ್ಟು ಅಸಮಧಾನ ಇತ್ತು.ನಾನು ಎಲ್ಲ ಶಾಸಕರ ಜೊತೆ ಒನ್-ಟು-ಒನ್ ಚರ್ಚೆ ಮಾಡ್ತೆನೆ ನಮ್ಮ ಶಾಸಕರು ಹಾಲಿ ಸಂಸದರಿಗೆ ವಿರೋಧ ಮಾಡಿದ್ದರು‌ ಬೀದರ್‌ನಲ್ಲಿ ನಾವು ಗೆದ್ದೆ ಗೆಲುತ್ತೇವೆ.ನಮಗೆ ಬೀದರ್​ನಲ್ಲಿ ಕಾರ್ಯಕರ್ತರ ಬೇಸರ ಇದೆ ಎಂದರು.

ಬ್ರಹ್ಮ ಬಂದ್ರೂ ನನ್ನ ಸ್ಪರ್ಧೆ ತಪ್ಪಿಸೋಕ್ಕಾಗಲ್ಲ ಎಂಬ ಈಶ್ವರಪ್ಪ ಹೇಳಿಕೆ ‌ವಿಚಾರವಾಗಿ ಮಾತನಾಡಿದ ಅವರು  ಬ್ರಹ್ಮಯಾವತ್ತು ಭೂಮಿಗೆ ಬರೋದಿಲ್ಲ ನಮ್ಮದು ಕಾರ್ಯಕರ್ತರ ಪಕ್ಷ, ಈಶ್ವರಪ್ಪನವರ ಬಂಡಾಯ ಶಮನವಾಗುತ್ತೆ‌.ನಾಮಪತ್ರ ಸಲ್ಲಿಕ್ಕೆ ವೇಳೆಗೆ ಎಲ್ಲವೂ ಶಮನವಾಗುತ್ತೆ ಎಂದರು.

ಬೆಂಗಳೂರು ಗ್ರಾಮಾಂತರದಲ್ಲಿ ನಾವೇ ಗೆಲ್ಲೋದು

ಕಾಂಗ್ರೆಸ್‌ನವರು ಹೆದರಿ ಹೋಗಿದ್ದಾರೆ.ಬಿಜೆಪಿ-ಜೆಡಿಎಸ್ ಇಂತಹ ಪ್ರಯೋಗ ಮಾಡುತ್ತೆ ಅಂತ ಯಾರು ಅನ್ಕೊಂಡಿರಲಿಲ್ಲ ಡಾಕ್ಟರ್ ಮಂಜುನಾಥ್​ ಈ ಭಾರಿ ಭಾರಿ ಅಂತರದಿಂದ ಗೆಲ್ಲುತ್ತಾರೆ ಎಂದರು.

ಮೊದಲು ಕಾಂಗ್ರೆಸ್​ನವರ ಮನೆ ಹಾಳಗಬೇಕು‌‌

ಈ ದೇಶದ್ರೋಹಿಗಳ ಪರವಾಗಿದ್ದವರು ಮೊದಲು ಕಾಂಗ್ರೆಸ್​ನವರ ಅವರ ಮನೆ ಹಾಳಗಬೇಕು‌ ಎಂದರು.

RSSನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಿಲ್ಲ ಅನ್ನೂ ಸಿದ್ದರಾಮಯ್ಯ ಹೇಳಿಕೆ ವಿಚಾರ‌ವಾಗಿ ಮಾತನಾಡಿದ ಅವರು,ಸಿದ್ದರಾಮಯ್ಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರಾ..?ಮೊದಲು ಅವರು ಭಾಗಿಯಲ್ಲ ಅದನ್ನ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬರ ಪರಿಹಾರಕ್ಕಾಗಿ ಕೇಂದ್ರ ವಿರುದ್ದ ಸುಪ್ರೀಂ ಮೊರೆ ಹೊದ ವಿಚಾರ‌ವಾಗಿ ಪ್ರತಿಕ್ರಿಯಿಸಿದ ಅವರು ಇದು ನಾಚೀಕೆಗೇಡಿನ ಸಂಗತಿ ಪಕ್ಕದ ರೇವಂತ ರೆಡ್ಡಿ ನೋಡಿ ಕಲಿಯಬೇಕು‌, ರೇವಂತ್ ರೆಡ್ಡಿ ಅವರ ಪಕ್ಷದವರೇ‌ ಅವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಯಿರಿ ಎಂದು ಮಾತಿನ ಚಾಟಿ ಬೀಸಿದ್ದರು.

ಸಿದ್ದರಾಮಯ್ಯನವರಿಗೆ ಧಮ್ ಇದ್ರೆ ಬರ ಪರಿಹಾರ ನಮಗೆ ಕೇಳಲಿ

ಸಿದ್ದರಾಮಯ್ಯನವರಿಗೆ ಧಮ್ ಇದ್ರೆ ಬರ ಪರಿಹಾರ ನಮಗೆ ಕೇಳಲಿ. ಹಿಂದೆ ನಾವು ಯಾವ ರೀತಿ ಪರಿಹಾರ ಕೊಟ್ಟಿದ್ದೇವೆ.ನೀವು ಪವರ್ ಫುಲ್ ಸಿಎಂ ಅಂತಾರಲ್ಲ,ಭೀಮಾ ನದಿಗೆ ನೀರು ಬಿಡಿಸಲಿ ಮಹಾರಾಷ್ಟ್ರದ ಸಿಎಂ ಬಳಿ ಹೋಗಿ ಚರ್ಚೆ ಮಾಡಲಿ ಇಲ್ಲಾ ಅವರ ಕೈಯಲ್ಲಿ ಆಗೋಲ್ಲ ಅಂತ ಹೇಳಲಿ ನಾವ್ ಮಾಡ್ತೆವೆ‌ ಎಂದು ಕಿಡಿಕಾರಿದ್ದರು.

ಸಿಎಂ ಖುರ್ಚಿಗೆ ಬಹಳ ಜನ ಕಣ್ಣೀಟ್ಟಿದ್ದಾರೆ

ಪವರ್ ಫುಲ್ ಸಿಎಂನ್ನ ವೀಕ್ ಮಾಡತ್ತಿರೋದು ಅವರ ನಾಯಕರು ಲೋಕಸಭೆ ಚುನಾವಣೆ ಮುಗಿದ ಸಿದ್ದು ಕೆಳಗಿಳಿಯುತ್ತಾರೆಂದು ಅವರ ಶಾಸಕರೇ ಹೇಳಿದ್ದಾರೆ‌. ರಾಜ್ಯದಲ್ಲಿ ಬಹಳಷ್ಟು ಜನ ಶ್ಯಾಡೋ ಸಿಎಂ ಇದ್ದಾರೆಂದ ನಮ್ಮ ಪ್ರಧಾನಿಗಳೇ ಹೇಳಿದ್ದಾರೆ ಎಂದು ಹೇಳಿದ್ದರು.

ಸೋಲುವ ಭಯದಿಂದ ಮಲ್ಲಿಕಾರ್ಜುನ ಖರ್ಗೆ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.ನಮ್ಮ ಪಕ್ಷದ ಅಭ್ಯರ್ಥಿ ಉಮೇಶ್ ಜಾಧವ್ ಗೆಲ್ತಾರೆ. ಕಾಂಗ್ರೆಸ್ ನಲ್ಲಿ ಬರೀ ಕುಟುಂಬದವರಿಗೆ ಟಿಕೆಟ್ ನೀಡಿದ್ದಾರೆ ಎಂದು ಗುಡುಗಿದ್ದರು.

RELATED ARTICLES

Related Articles

TRENDING ARTICLES