Saturday, April 27, 2024

ಮಾಸ್ಕೋದಲ್ಲಿ ಉಗ್ರರ ಅಟ್ಟಹಾಸ: 60 ಕ್ಕೂ ಹೆಚ್ಚು ಮಂದಿ ಸಾವು!

ರಷ್ಯಾ (ಮಾಸ್ಕೋ) : ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಉಗ್ರರು ದಾಳಿ ಮಾಡಿದ್ದಾರೆ. ಕಾರ್ಯಕ್ರಮ ನಡೆಯುತ್ತಿದ್ದ ಹಾಲಿನಲ್ಲಿ ಉಗ್ರರು ಮನಸೋ ಇಚ್ಚೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಇದರ ಪರಿಣಾಮ ಸುಮಾರು 60 ಅಮಾಯಕರು ಬಲಿಯಾಗಿದ್ದರೆ, 150ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿದೆ.

ಇದನ್ನೂ ಓದಿ: ಹಾಸನ ಜಿಲ್ಲಾಧಿಕಾರಿ ವಿರುದ್ದ ಕೇಂದ್ರ ಚುನಾವಣಾಧಿಕಾರಿಗಳಿಗೆ ಮಾಜಿ ಪ್ರಧಾನಿ ದೂರು!

ಶುಕ್ರವಾರ ರಾತ್ರಿ ಮಾಸ್ಕೋದ ಹೊರವಲಯದಲ್ಲಿರುವ ಕ್ರೋಕಸ್​ ಸಿಟಿ ಹಾಲ್ ನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾಲ್​ ಒಳಗೆ ಶಸ್ತ್ರ ಸಜ್ಜಿತ 5 ಮಂದಿ ಉಗ್ರರ ತಂಡವು ನುಗ್ಗಿ ಮನಸೋ ಇಚ್ಚೆ ಕಂಡ ಕಂಡವರ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಬಳಿಕ ಬಾಂಬ್​ ಸ್ಪೋಟಿಸಿದ್ದಾರೆ. ಸುಮಾರು 15 ರಿಂದ 20 ನಿಮಿಷಗಳ ವರೆಗೆ ನಡೆದ ಈ ದಾಳಿಯಲ್ಲಿ ಹಾಲ್​ ನಲ್ಲಿದ್ದ 60 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದು 150 ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಹೇಳಿದೆ.

ಈ ದಾಳಿಯು ಭಾರತದ ಮುಂಬೈನ ತಾಜ್ ಹೋಟೆಲ್​ ಮೇಲೆ 26 ನವೆಂಬರ್​ 2021 ರಂದು ನಡೆದ (26/11) ದಾಳಿಯನ್ನು ನೆನಪಿಸುವಂತಿದೆ. ಈ ದಾಳಿಯ ಹೊಣೆಯನ್ನು ಐಸಿಸ್‌ ಸಂಘಟನೆ ಹೊತ್ತಿದ್ದು, ರಷ್ಯಾದ ಅಧ್ಯಕ್ಷ ಪುಟಿನ್​ ಈ ಕುರಿತು ಪ್ರತಿಕ್ರಿಯಿಸಿ ಈ ದಾಳಿಗೆ ಐಸಿಸ್​ ತಕ್ಕ ಬೆಲೆ ತೆರಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES