Wednesday, May 8, 2024

ಮಾಜಿ ಸಚಿವ ಡಾ.ಸುಧಾಕರ್ ರಿಂದ ಧಮ್ಕಿ : ಎಸ್​.ಆರ್​ ವಿಶ್ವನಾಥ್​ ಆರೋಪ

ಬೆಂಗಳೂರು : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ನಿಂದ ಅಧಿಕೃತ ಅಭ್ಯರ್ಥಿಗಳ ಘೋಷಣೆ ಬಾಕಿ ಇದ್ದರು ಮಾಜಿ ಸಚಿವ ಡಾ.ಸುಧಾಕರ್​ ಅವರ ಬೆಂಬಲಿಗರು ಕ್ಷೇತ್ರದ ಜನತೆಯಲ್ಲಿ ಸುಧಾಕರ್​ ಅವರಿಗೆ ಟಿಕೆಟ್​ ಘೋಷಣೆಯಾಗಿದೆ, ಮುಂದಿನ ಕೇಂದ್ರ ಆರೋಗ್ಯ ಸಚಿವರಿಗೆ ಶುಭಾಶಯಗಳು ಎನ್ನುವ ರೀತಿಯಲ್ಲಿ ಪೋಸ್ಟರ್​ಗಳನ್ನ ಹಾಕುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಸುಧಾಕರ್​ ವಿರುದ್ದ ಶಾಸಕ ಎಸ್​.ಆರ್​ ವಿಶ್ವನಾಥ್​ ಕಿಡಿ ಕಾರಿದರು.

ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನೆನ್ನೆ ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನತೆಯಲ್ಲಿ ಹೈಕಮಾಂಡ್​ ನಿಂದ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗದಿದ್ದರೂ ಸುಧಾಕರ್​ ಬೆಂಬಲಿಗರು ಟಿಕೆಟ್​ ಘೋಷಣೆಯಾಗಿದೆ ಎಂದು ಕ್ಷೇತ್ರದ ಜನತೆಯಲ್ಲಿ ಗೊಂದಲ ಉಂಟು ಮಾಡುತ್ತಿರುವ ವಿಚಾರ ಅವರ ಗಮನಕ್ಕೆ ತಂದಿದ್ದೇವೆ. ಅಷ್ಟೆ ಅಲ್ಲದೇ ಅಲೋಕ್​ ವಿಶ್ವನಾಥ್​ ಪತ್ರಿಕಾಗೋಷ್ಟಿಗಳಿಗೆ ಹಾಜರಾಗದಂತೆ ಕ್ಷೇತ್ರದ ಮುಖಂಡರಿಗೆ ಮಾಜಿ ಸಚಿವರು ದಮ್ಕಿ ಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಇದು ಒಳ್ಳೆಯ ಬೆಳವಣಿಗೆಗಳಲ್ಲ ಎಂದರು.

ಇದನ್ನೂ ಓದಿ: ಸೋನು ಶ್ರೀನಿವಾಸ್​ ಗೌಡ ಬಂಧನ: ಡಿಸಿಪಿ ಗಿರೀಶ್​ ಪ್ರತಿಕ್ರಿಯೆ!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಸಚಿವರಾಗಿದ್ದವರು ಜನರೊಂದಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ, ಪಕ್ಷ ಸಂಘಟನೆ ಮಾಡಿಲ್ಲ, ಜನರ ಕೈಗೆ ಸಿಕ್ಕಿಲ್ಲ ಎನ್ನುವ ಆರೋಪ ಇದೆ. ಆದರೇ, ಅಲೋಕ್​ ವಿಶ್ವನಾಥ್​ ಯುವಕ, ಭಾಷೆಯ ಮೇಲೆ ಹಿಡಿತವಿದ್ದು ಕೇಂದ್ರ ರಾಜಕಾರಣಕ್ಕೆ ಸೂಕ್ತ ವ್ಯಕ್ತಿ ಮತ್ತು ಟಿಕೆಟ್​ ಸಿಕ್ಕರೆ ಖಂಡಿತ ಗೆಲ್ಲುತ್ತಾರೆ ಎನ್ನುವ ಮಾತನ್ನು ಕ್ಷೇತ್ರದ ಜನ ಅಭಿಪ್ರಾಯ ಪಟ್ಟಿದ್ದಾರೆ ಎಂದರು.

ಇನ್ನು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಅಲೋಕ್​ ವಿಶ್ವನಾಥ್​ ಗೆ ಬೇರೆ ಬೇರೆ ಕಾರಣಗಳಿಂದ ಟಿಕೆಟ್ ಸಿಗದಿದ್ದರೇ ನನಗೆ ನೀಡಿ ಎಂದು ಹೇಳಿ ಕೇಂದ್ರ ಹಾಗು ರಾಜ್ಯ ನಾಯಕರಿಗೆ ಪತ್ರ ಬರೆದಿದ್ದೇನೆ ಎಂದು ​ಅವರು ಹೇಳಿದರು. 

RELATED ARTICLES

Related Articles

TRENDING ARTICLES