Saturday, May 4, 2024

ಸೋನು ಶ್ರೀನಿವಾಸ್​ ಗೌಡ ಬಂಧನ: ಡಿಸಿಪಿ ಗಿರೀಶ್​ ಪ್ರತಿಕ್ರಿಯೆ!

ಬೆಂಗಳೂರು : ಸೋನು ಶ್ರೀನಿವಾಸ್​ ಗೌಡ ಅವರನ್ನು ಮಹಿಳಾ ಹಾಗು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಬಂಧನ ಮಾಡಲಾಗಿದೆ ಎಂದು ಪಶ್ಷಿಮ ವಿಭಾಗದ ಡಿಸಿಪಿ ಗಿರೀಶ್ ಅವರು ತಿಳಿಸಿದರು.

ಇದನ್ನೂ ಓದಿ: ಜಲಕ್ಷಾಮ: ಕೊಳವೇ ಬಾವಿಗಳು ಜಲಮಂಡಳಿ ವಶಕ್ಕೆ!

ನಗರದಲ್ಲಿ ಮಾದ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ರಾಯಚೂರು ಮೂಲದ ದಂಪತಿಗಳ ಒಂದು ಹೆಣ್ಣುಮಗುವನ್ನು ದತ್ತು ಪಡೆದಿದ್ದೇನೆ ಎಂದು ಹೇಳಿಕೊಂಡು ಸೋನು ಶ್ರೀನಿವಾಸ್ ಗೌಡ ಎಂಬ ಯುವತಿ ಯಾವುದೇ ಕಾನೂನು ರೀತ್ಯ ದತ್ತು ಪಡೆಯದೇ ಕೇವಲ ಹೆಣ್ಣು ಮಗುವನ್ನು ತಮ್ಮ ರೀಲ್ಸ್​ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ದೂರಿನ ಆಧಾರ ಮೇಲೆ ಸೋನು ಶ್ರೀನಿವಾಸ್​ ಗೌಡ ಮೇಲೆ ಜುವೆನಲ್​ ಜಸ್ಟೀಸ್​ ಆ್ಯಕ್ಟ್​ ಪ್ರಕಾರ ಬಂಧನ ಮಾಡಲಾಗಿದ್ದು ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES