Saturday, May 4, 2024

ಜಲಕ್ಷಾಮ: ಕೊಳವೇ ಬಾವಿಗಳು ಜಲಮಂಡಳಿ ವಶಕ್ಕೆ!

ಬೆಂಗಳೂರು : ನಗರದಲ್ಲಿ ದಿನೇ ದಿನೇ ನೀರಿನ ಅಭಾವದ ವರಿಯಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಜನತೆಗೆ ಜಲಮಂಡಳಿ ಶಾಕ್​ ನೀಡಲು ಮುಂದಾಗಿದೆ.

ಅಂತರ್ಜಲ ಮಟ್ಟ ಕುಸಿತದಿಂದ ಈಗಾಗಲೇ ಕೊಳವೆ ಬಾವಿಗಳು ಬತ್ತಿಹೋಗಿದ್ದು ನೀರಿನ ಅಭಾವ ಹೆಚ್ಚಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆ ನಗರದಲ್ಲಿನ ಖಾಸಗಿ ಸಹಭಾಗಿತ್ವದ ಕೊಳವೆಬಾವಿಗಳನ್ನು ಜಲಮಂಡಳಿ ವಶಕ್ಕೆ ಪಡೆದು ಕೊಳ್ಳಲಿದೆ.

ಇದನ್ನೂ ಓದಿ: Sonu Srinivas Gowda: ರೀಲ್ಸ್​ ರಾಣಿ ಸೋನು ಶ್ರೀನಿವಾಸ್ ಗೌಡ​ ಅರೆಸ್ಟ್

ನಗರದಲ್ಲಿನ 20ಸಾವಿರ ಚದರ ಅಡಿ ಮೆಲ್ಪಟ್ಟ ಕಟ್ಟಡ ನಿರ್ಮಾಣದ ಪ್ರದೇಶದಲ್ಲಿರುವ ಕೊಳವೆಬಾವಿ ಜಲಮಂಡಳಿ ಸುಪರ್ದಿಗೆ ಪಡೆಯುವ ಮೂಲಕ ಜಲಕ್ಷಾಮವನ್ನು ತಡೆಗಟ್ಟಲು ಜಲಮಂಡಳಿ ಮುಂದಾಗಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ ಸಮಾನವಾಗಿ ನೀರು ಒದಗಿಸಲು ಚಿಂತನೆ ನಡೆಸಿದೆ.

ಇನ್ನು, ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾದ್​ ಮನೋಹರ್​ ಅವರು ಕಟ್ಟಡ ನಿರ್ಮಾಣ ಮಾಲೀಕರಿಗೆ ಖಡಕ್​ ಸೂಚನೆಯೊಂದನ್ನು ನೀಡಿದ್ದು, ನೂತನವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿರುವವರು ನಗರದಲ್ಲಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡುವಂತೆ ತಿಳಿಸಿದೆ, ಇದನ್ನು ಜಲಮಂಡಳಿಯಿಂದ ಕೇಳಿ ಪಡೆಯುವಂತೆ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES