Sunday, April 28, 2024

ಬೆಣ್ಣೆನಗರಿಯಲ್ಲಿ ‘ಸ್ತ್ರೀ ಶಕ್ತಿ’ ಕದನ : 100ಕ್ಕೆ 110ರಷ್ಟು ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕ್ತೀವಿ : ಪ್ರಭಾ ಮಲ್ಲಿಕಾರ್ಜುನ್ ಸವಾಲ್

ದಾವಣಗೆರೆ : ಬೆಣ್ಣೆನಗರಿಯಲ್ಲಿ ‘ಸ್ತ್ರೀ ಶಕ್ತಿ’ ಕದನ ಶುರುವಾಗಿದೆ. ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್ ಹಾಗೂ ಕಾಂಗ್ರೆಸ್​ನಿಂದ ಪ್ರಭಾ ಮಲ್ಲಿಕಾರ್ಜುನ್ ಕಣಕ್ಕೆ ಇಳಿದಿದ್ದಾರೆ. ಮತ್ತೆ ಜಿ.ಎಂ. ಸಿದ್ದೇಶ್ವರ್ vs ಶಾಮನೂರು ಕುಟುಂಬ ಮುಖಾಮುಖಿಯಾಗಿದೆ.

ಈ ಕುರಿತು ದಾವಣಗೆರೆಯಲ್ಲಿ ಪವರ್ ಟಿವಿಯೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್, ನೂರಕ್ಕೆ ನೂರರಷ್ಟು ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕ್ತೀವಿ ಎಂದು ಸವಾಲ್ ಹಾಕಿದರು.

ಯಾವುದೋ ಅಲೆಯಲ್ಲಿ ಗೆದ್ದು ಬರೋದು ಡೆಮಾಕ್ರಸಿ ಅಲ್ಲ. ಅಭ್ಯರ್ಥಿ ಕೆಲಸ ನೋಡಿ ಮತ ಹಾಕಬೇಕಿದೆ. ಮಹಿಳೆಯರು, ರೈತರ ಸಮಸ್ಯೆ ಆಲಿಸಿ ಕೆಲಸ ಮಾಡಬೇಕಿದೆ. ಯಾವುದೋ ಅಲೆ, ಸೆಂಟ್ರಲ್ ಲೀಡರ್ಸ್ ಶಿಪ್​ಗೆ ವೋಟ್ ಹಾಕೋದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಗೆಲ್ಲುವ ಅಭ್ಯರ್ಥಿ ಅಂತ ಟಿಕೆಟ್ ಕೊಟ್ರು

ಎಸ್​.ಎಸ್ ಕೇರ್ ಟ್ರಸ್ಟ್ ಮೂಲಕ ಆರೋಗ್ಯ ಸೇವೆ, ಶಿಕ್ಷಣ ಸೇವೆ ನೀಡಿದ್ದೇವೆ. ಈ ಬಾರಿ ಬಿಜೆಪಿಗೆ ಬ್ರೇಕ್ ಹಾಕೇ ಹಾಕ್ತಿವಿ. ಗ್ಯಾರಂಟಿ ಯೋಜನೆ, ಸರ್ಕಾರದ ಕೆಲಸವನ್ನ ಜನರು ಮೆಚ್ಚಿದ್ದಾರೆ. ನಾವು ಟಿಕೆಟ್ ಕೇಳಿಲ್ಲ, ಸರ್ವೆ ಆಧಾರದ ಮೇಲೆ ಟಿಕೆಟ್ ಕೊಟ್ಟಿದ್ದಾರೆ. ಪೈಪೋಟಿ, ಗೆಲ್ಲುವ ಅಭ್ಯರ್ಥಿ ಎಂದು ಗುರುತಿಸಿ ಟಿಕೆಟ್ ನೀಡಿದ್ದಾರೆ. ಸರ್ವೆ ಪ್ರಕಾರ ಒಲವು ಇದೆ, ಹೀಗಾಗಿ ಪಕ್ಷ ನನಗೆ ಟಿಕೆಟ್ ನೀಡಿದೆ ಎಂದು ಹೇಳಿದರು.

100ಕ್ಕೆ 110 ಪರ್ಸೆಂಟ್ ಗೆದ್ದೆ ಗೆಲ್ತೇವೆ

ಕುಟುಂಬ ರಾಜಕಾರಣ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಆರೋಪ ವಿಚಾರವಾಗಿ ಮಾತನಾಡಿ, ಅವರು ಮನೆಯವರೇ ಸ್ಪರ್ಧೆ ಮಾಡಿದ್ದಾರೆ. ಅವರದು ಕುಟುಂಬ ರಾಜಕಾರಣ ಅಲ್ವಾ? ಈ ಹಿಂದೆ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸೋಲಿನ ಅಂತರ ಕಡಿಮೆ ಇತ್ತು. ಈ ಬಾರಿ100ಕ್ಕೆ 110 ಪರ್ಸೆಂಟ್ ಗೆದ್ದೆ ಗೆಲ್ತೇವೆ ಎಂದು ಪ್ರಭಾ ಮಲ್ಲಿಕಾರ್ಜುನ್ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES