Monday, May 13, 2024

ಪ್ರಜ್ವಲ್ ರೇವಣ್ಣ ರಾಸಲೀಲೆ ಕೇಸ್ : SIT ತಂಡ ರಚಿಸಿ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣವನ್ನು ತನಿಖೆಗೆ ಒಳಪಡಿಸಲು ರಾಜ್ಯ ಸರ್ಕಾರ ವಿಶೇಷ ತನಿಖಾ(ಎಸ್​ಐಟಿ) ತಂಡಕ್ಕೆ ವಹಿಸಿತ್ತು.

ಇದೀಗ ರಾಜ್ಯ ಸರ್ಕಾರವು, ಐಪಿಎಸ್​ ಅಧಿಕಾರಿ ಬಿಜಯ್ ಕುಮಾರ್ ಸಿಂಗ್(ಬಿ.ಕೆ.ಸಿಂಗ್, CID ADGP) ನೇತೃತ್ವದಲ್ಲಿ ಎಸ್​ಐಟಿ ತಂಡವನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

ಈ ತಂಡದಲ್ಲಿ ಸುಮನ್ ಡಿ ಪನ್ನೇಕರ್(IPS ಅಧಿಕಾರಿ), ಸೀಮಾ ಲಾಟ್ಕರ್(IPS ಅಧಿಕಾರಿ) ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಅಶ್ಲೀಲ ವಿಡಿಯೋ ಪ್ರಕರಣವನ್ನು ಬಿಚ್ಚಿಡಲು ಎಸ್​ಐಟಿ ತಂಡ ತನಿಖೆ ಶುರು ಮಾಡಲಿದೆ.

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದೂರಿನ ಬೆನ್ನಲ್ಲೇ FIR ದಾಖಲಾಗಿದೆ. ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 354(ಎ), 354 (ಡಿ), 506 ಹಾಗೂ 509ರ ಅಡಿ ದೂರನ್ನು ಎಸ್​ಐಟಿಗೆ ವರ್ಗಾವಣೆ ಮಾಡಲಾಗಿದೆ. 354(ಎ)-ಲೈಂಗಿಕ ಕಿರುಕುಳ, 354 (ಡಿ) ಮಹಿಳೆ ಜೊತೆ ಅಸಭ್ಯ ವರ್ತನೆ ಹಿನ್ನಲೆಯಲ್ಲಿ 506- ಬೆದರಿಕೆ, 509-ಮಹಿಳೆಯ ಮಾನಕ್ಕೆ ಹಾನಿ ಪ್ರಕರಣ ದಾಖಲಿಸಲಾಗಿದೆ.

ಪ್ರಜ್ವಲ್‌ ವಿದೇಶಕ್ಕೆ ಹೋಗಿದ್ದಾರೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಕೇಸ್ ಕುರಿತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಪವರ್ ಟಿವಿಯೊಂದಿಗೆ ಮಾತನಾಡಿದ್ದಾರೆ. ನಿನ್ನೆ ಒಬ್ಬರು ಸಂತ್ರಸ್ತೆ ಬಂದು ದೂರು ಕೊಟ್ಟಿದ್ದಾರೆ. ದೂರಿನ ಪ್ರತಿಯನ್ನ ಸಿಎಂ, ಗೃಹ ಸಚಿವರಿಗೆ ಕಳಿಸಿದ್ದೇನೆ. ರಾಜ್ಯ ಸರ್ಕಾರ SIT ರಚನೆ ಮಾಡಿದೆ, ನ್ಯಾಯ ಸಿಗುತ್ತೆ. ಅನ್ಯಾಯಕ್ಕೊಳಗಾದವರು ದೂರು ಕೊಟ್ಟರೆ ಅನುಕೂಲ. ಪ್ರಜ್ವಲ್‌ ವಿದೇಶಕ್ಕೆ ಹೋಗಿದ್ದಾರೆ ಅನ್ನೋ ಮಾಹಿತಿ ಇದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES