Monday, May 13, 2024

ಫ್ಯಾಮಿಲಿ ಜೊತೆ ವಿದ್ಯಾರ್ಥಿ ಭವನ ದೋಸೆ ರುಚಿ ಸವಿದ ಅನಿಲ್​ ಕುಂಬ್ಳೆ

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ, ಕುಟುಂಬ ಸಮೇತರಾಗಿ ಗಾಂಧೀ ಬಜಾರ್‌ನಲ್ಲಿರುವ ಪ್ರಸಿದ್ಧ ವಿದ್ಯಾರ್ಥಿ ಭವನ ಹೋಟೆಲಿಗೆ ಭೇಟಿ ನೀಡಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿವೆ.

ತಮ್ಮ ಕುಟುಂಬ ಸದಸ್ಯರ ಜೊತೆ ಭೇಟಿ ನೀಡಿದ ಕುಂಬ್ಳೆ ವಿದ್ಯಾರ್ಥಿ ಭವನದ ಫೇಮಸ್ ಮಸಾಲೆ ದೋಸೆಯನ್ನು ಸವಿದಿದ್ದಾರೆ. ಕುಂಬ್ಳೆ ಬಂದ ವಿಚಾರವನ್ನು ವಿದ್ಯಾರ್ಥಿ ಭವನ ಎಕ್ಸ್‌ನಲ್ಲಿ ತಿಳಿಸಿದ್ದು, ಇಂದು ವಿದ್ಯಾರ್ಥಿ ಭವನದಲ್ಲಿ ಸುಂದರ ಜೋಡಿಯನ್ನು ನೋಡಿ ಸಂತೋಷವಾಯಿತು ಎಂದು ಬರೆದುಕೊಂಡು ಹೋಟೆಲ್‌ನಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವೀಡಿಯೋ ಪ್ರಕರಣ SIT ತನಿಖೆಗೆ ಆದೇಶ : ಜರ್ಮನಿಗೆ ಹಾರಿದ ಪ್ರಜ್ವಲ್​ ರೇವಣ್ಣ

ವಿದ್ಯಾರ್ಥಿ ಭವನವನ್ನು 1943ರಲ್ಲಿ ಉಡುಪಿಯ ವೆಂಕಟರಮಣ ಉರಾಲ್ ಎನ್ನುವವರು ಸ್ಥಾಪಿಸಿದರು. ಸಮೀಪದಲ್ಲಿದ್ದ ಶಾಲೆ, ಕಾಲೇಜಿನ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೋಟೆಲ್ ಆರಂಭಿಸಲಾಯ್ತು. ಆರಂಭದಲ್ಲಿ ಇಲ್ಲಿಗೆ ವಿದ್ಯಾರ್ಥಿಗಳೇ ತಿಂಡಿ ಸವಿಯಲು ಬರುತ್ತಿದ್ದರಿಂದ ಸ್ನೇಹಿತರೊಬ್ಬರ ಸಲಹೆ ಮೇರೆಗೆ ವೆಂಕಟರಮಣ ಉರಾಲ್. ಇದಕ್ಕೆ ವಿದ್ಯಾರ್ಥಿ ಭವನ ಎಂದು ಹೆಸರಿಟ್ಟರು. ಈ ಹೋಟೆಲ್ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತು.

RELATED ARTICLES

Related Articles

TRENDING ARTICLES