Thursday, June 6, 2024

ರಾಹುಲ್ ಗಾಂಧಿ ಜೊತೆ ಚರ್ಚಿಸಲು ಮೋದಿಗೆ ಧೈರ್ಯವಿಲ್ಲ : ಜೈರಾಮ್ ರಮೇಶ್

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯ ಇಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕುಟುಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಹೊರಹೋಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದಿನಪತ್ರಿಕೆಗಳು ಹಾಗೂ ಟಿವಿ ಚಾನೆಲ್‌ಗಳಿಗೆ ನೀಡುವ ಸಂದರ್ಶನಗಳು ನಕಲಿಯಾಗಿವೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿಯವರ ಸಂದರ್ಶನಗಳಲ್ಲಿ ನಾಟಕೀಯತೆ ಮತ್ತು ಸುಳ್ಳುಗಳನ್ನು ಹೊರತುಪಡಿಸಿ ಯಾವುದು ಸಹಜ ಮತ್ತು ಸ್ವಾಭಾವಿಕವಾಗಿ ಇರುವುದಿಲ್ಲ. ದೇಶದಲ್ಲಿ ಪ್ರಸ್ತುತ ಇರುವ ಅಥವಾ ಹಿಂದಿನ ಯಾವುದೇ ರಾಜಕೀಯ ನಾಯಕರು ಮಾಧ್ಯಮಗಳೊಂದಿಗೆ ಈ ರೀತಿ ವ್ಯವಹರಿಸಿಲ್ಲ ಎಂದು ಜೈರಾಮ್‌ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಚರ್ಚೆಯಲ್ಲಿ ಭಾಗವಹಿಸಲಿ

ಚರ್ಚೆಯಲ್ಲಿ ಭಾಗವಹಿಸಲು ಪಂಥಾಹ್ವಾನವನ್ನು ಸ್ವೀಕರಿಸಿರುವ ರಾಹುಲ್ ಗಾಂಧಿ, ನಾವು ಸಿದ್ದವಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಯಲ್ಲಿ ಭಾಗವಹಿಸಬೇಕೆಂದು ದೇಶದ ಜನತೆ ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಿದ್ದರು. ಲೋಕಸಭೆ ಚುನಾವಣೆಯ ಪ್ರಮುಖ ವಿಷಯಗಳ ಕುರಿತು ಚರ್ಚೆಯಲ್ಲಿ ಭಾಗಹಿಸುವಂತೆ ನಿವೃತ್ತ ನ್ಯಾಯಾಧೀಶರಾದ ಮದನ್‌ ಬಿ.ಲೋಕೂರ್ ಮತ್ತು ಅಜಿತ್ ಪಿ.ಶಾ ಮತ್ತಿತ್ತರರು ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರದ ಹಿಂದೆ ಪತ್ರ ಬರೆದು ಆಹ್ವಾನ ನೀಡಿದ್ದರು.

RELATED ARTICLES

Related Articles

TRENDING ARTICLES