Thursday, December 5, 2024

ನನಗೆ ಒಂದು ನ್ಯಾಯ ನಾಗೇಂದ್ರ ಅವರಿಗೊಂದು‌ ನ್ಯಾಯನಾ? – ಕೆ.ಎಸ್​ ಈಶ್ವರಪ್ಪ ಪ್ರಶ್ನೆ

ಶಿವಮೊಗ್ಗ : ಸಚಿವ ನಾಗೇಂದ್ರ ರಾಜಿನಾಮೆ ಈಗಾಗಲೇ ನೀಡಬೇಕಿತ್ತು ಎಂದು ಮಾಜಿ ಡಿಸಿಎಂ ಮಾಜಿ ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ವಿಚಾರಿಸಿದ ಅವರು, ಸಿದ್ದರಾಮಯ್ಯಗೆ ನಾಚಿಕೆ, ಮಾನ, ಮರ್ಯಾದೆ ಇದಿಯಾ? ಡೆತ್​ನೋಟ್​ನಲ್ಲಿ ಅಧಿಕಾರಿ ಸಚಿವ ಎಂದು ಉಲ್ಲೇಖ ಮಾಡಿದ್ದಾರೆ. ಸಚಿವ ಅಂದ್ರೆ ವಿದೇಶಾಂಗ ಸಚಿವ ಬರ್ತಾರಾ? ಸಚಿವ ಅಂದ್ರೆ ಸಂಬಂಧಪಟ್ಟ ಇಲಾಖೆ ಸಚಿವನೇ ಬರೋದು. ನಿಗಮಕ್ಕೆ ಸಂಬಂಧಪಟ್ಟ ಸಚಿವ ಯಾರು? ಎಂದರು.

ಅದುವಲ್ಲದೇ ಮಾನ ಮರ್ಯಾದೆ ಇದ್ದಿದ್ದರೆ ಸಚಿವ ನಾಗೇಂದ್ರ ರಾಜೀನಾಮೆ ಕೊಡಿಸುತ್ತಿದ್ದರು. ನನ್ನ ಮೇಲೆ ಆರೋಪ ಬಂದಾಗ ಈಶ್ವರಪ್ಪ ರಾಜೀನಾಮೆ ಕೊಡಬೇಕು ಎಂದಿದ್ದರು. ನನಗೆ ಒಂದು ನ್ಯಾಯ ನಾಗೇಂದ್ರ ಅವರಿಗೊಂದು‌ ನ್ಯಾಯನಾ? ನಾಗೇಂದ್ರ ಅವರು ಈ ಕ್ಷಣ ರಾಜೀನಾಮೆ ಕೊಡಲಿ ಎಂದು ಕೆ.ಎಸ್​ ಈಶ್ವರಪ್ಪನವರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES