Sunday, December 8, 2024

ಮಂಗಾರು ಮಳೆ ಬೀಳಬಹುದೇ ಹೊರತು ಸರ್ಕಾರ ಬೀಳಲ್ಲ – ಎಂಎಲ್​ಸಿ ಲಖನ್​ ಜಾರಕಿಹೊಳಿ

ಬೆಳಗಾವಿ: ಒಳ್ಳೆ ಕೆಲಸ ಮಾಡಿದವರಿಗೆ ಜನ ಮತ ಹಾಕ್ತಾರೆ, ಇದರಲ್ಲಿ ಸೇಡು ಎನ್ನುವ ಪ್ರಶ್ನೆಯೇ ಬರಲ್ಲ ಎಂದು ಎಂಎಲ್​ಸಿ ಲಖನ್​ ಜಾರಕಿಹೊಳಿ ಅವರು ಹೇಳಿದರು.

ನಗರದಲ್ಲಿಂದು ಹೆಬ್ಬಾಳ್ಕರ್ ಸೋಲಿಸಿ ಜಾರಕಿಹೊಳಿ ಬ್ರದರ್ಸ್ ಸೇಡು ತೀರಿಸಿಕೊಂಡರಾ ಎಂಬ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯರ ಬಗ್ಗೆ ಅಗೌರವ ತೋರಿ ಮಾತಾಡಿದ್ದರಿಂದ ಈ ರೀತಿ ಆಗಿದೆ. ಜಗದೀಶ್ ಶೆಟ್ಟರ್ ಅವರ ಸ್ವಭಾವ ನೋಡಿ ಜನ ಅವರಿಗೆ ಮತ ನೀಡಿದ್ದಾರೆ. ನಾನು ಪಕ್ಷೇತರ ಇದ್ದಿದ್ದರಿಂದಲೇ ಇಲ್ಲಿ ಜಗದೀಶ್ ಶೆಟ್ಟರ್​, ಅಲ್ಲಿ ಪ್ರಿಯಾಂಕಾ ಜಾರಕಿಹೊಳಿಯವರಿಗೆ ಸಪೋರ್ಟ್ ಮಾಡಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಸಿಎಂ ಸ್ಥಾನದ ಬಗ್ಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರಕ್ಕೆ ಏನೂ ತೊಂದರೆಯಿಲ್ಲ ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ. ಈಗ ಮುಂಗಾರು ಆರಂಭವಾಗಿದೆ ಮಳೆ ಬೀಳಬಹುದೇ ಹೊರತು, ಸರ್ಕಾರ ಬೀಳಲ್ಲ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.

ಇನ್ನು ಸತೀಶ್ ಜಾರಕಿಹೊಳಿ ಅವರು ಏಕನಾಥ್​ ಶಿಂಧೆ ಆಗ್ತಾರೆ ಮಹರಾಷ್ಟ್ರ ರಾಜ್ಯ ಮಾದರಿಯಲ್ಲಿ ಸರ್ಕಾರ ಬೀಳುತ್ತೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಜಾರಕಿಹೊಳಿ ಕುಟುಂಬದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಅದೆಲ್ಲ ಆಗಲ್ಲ. ಸೀನಿಯರ್ ಲಿಸ್ಟ್​ನಲ್ಲಿ ಸತೀಶ್ ಡಿಸಿಎಂ ಸಿಗಬಹುದು, ಮುಂದೆ ಕೊಡಬಹುದು ಎಂದು ಲಖನ್​ ಜಾರಕಿಹೊಳಿ ಅವರು ಮಾತಾಡಿದರು.

ಪಕ್ಷೇತರ ಎಂಎಲ್‌ಸಿ ಆಗಿದಕ್ಕೆ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಬೆಳಗಾವಿಯಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದೆ. ಈ‌ ಫಲಿತಾಂಶದಿಂದ ನನಗೆ ಬಹಳ ಸಂತೋಷ ಆಗಿದೆ. ಜನರ ಆಶೀರ್ವಾದ ಇರೋವರೆಗೂ ಜಾರಕಿಹೊಳಿ ಕುಟುಂಬ ಬಲಿಷ್ಠವಾಗಿರುತ್ತೆ. ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಸೋಲಿಸಲು ಕೆಲವರು ತಂತ್ರಗಾರಿಕೆ ಮಾಡಿದ್ರು. ರಾಜಕೀಯದಲ್ಲಿ ತಂತ್ರಗಾರಿಕೆ ಇದ್ದೆ ಇರುತ್ತೆ ಆದರೆ, ನಮಗೆ ಜನರ ಆಶೀರ್ವಾದ ಇದೆ. ಅಥಣಿಯಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಸಹ ಪ್ರಿಯಾಂಕಾಗೆ ಮತ ಕಡಿಮೆ ಬಂದಿವೆ. ಅಥಣಿ ಹಿನ್ನಡೆಗೆ ಕಾರಣ ಏನು ಎಂಬುದನ್ನು ಸಚಿವ ಸತೀಶ್ ಜಾರಕಿಹೊಳಿ ನೋಡ್ತಾರೆ ಆದರೆ ಅಥಣಿ ಕ್ಷೇತ್ರದಲ್ಲಿ ನಮಗೆ 25 ಸಾವಿರ ಲೀಡ್ ಬರಬೇಕಿತ್ತು ಎಂದಿದ್ದಾರೆ.

RELATED ARTICLES

Related Articles

TRENDING ARTICLES