Tuesday, May 14, 2024

ಪ್ರಜ್ವಲ್ ರಾಸಲೀಲೆ ಪ್ರಕರಣ : ನಾಳೆ ಹಾಸನದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಬೆಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ಏ.23ರಂದು ಸೈಬರ್ ಠಾಣೆಯಲ್ಲಿ ದೂರು‌ ದಾಖಲಿಸಿದ್ದರು.

ಇದೀಗ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ದ ಸಂತ್ರಸ್ಥ ಮಹಿಳೆಯರೇ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧಿಸಿದಂತೆ ನಾಳೆ ಹಾಸನದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ.

ಹಾಸನದಲ್ಲಿ ಮಹಿಳೆಯರ ಮೇಲೆ‌ ಸರಣಿ ದೌರ್ಜನ್ಯ ಪ್ರಕರಣ ಸಂಬಂಧಿಸಿದಂತೆ ಹೊಳೆನರಸೀಪುರ ನಗರ ಠಾಣೆಯಲ್ಲಿ ‌ಮೊದಲ ಎಫ್​ಐಆರ್ ದಾಖಲಾಗಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಎಫ್ಐಆರ್ ಆಗಿದ್ದು, ಸಂತ್ರಸ್ಥ ಮಹಿಳೆ ದೂರು ಆಧರಿಸಿ ಕೇಸ್ (FIR) ದಾಖಲಿಸಲಾಗಿದೆ.

ಲೈಂಗಿಕ ದೌರ್ಜನ್ಯ, ಪದೇ ಪದೆ ಹಿಂಬಾಲಿಸಿ ದೌರ್ಜನ್ಯ ಎಸಗಿದ ಬಗ್ಗೆ ಆರೋಪ. ಮಹಿಳೆಯ ಘನತೆಗೆ ಧಕ್ಕೆ ಆರೋಪಿ ಸೇರಿ ಹಲವು ಐಪಿಸಿ ಸೆಕ್ಷೆನ್​ಗಳಡಿ ಕೇಸ್ ದಾಖಲಿಸಿದೆ. ಐಪಿಸಿ ಸೆಕ್ಷೆನ್ 354A , 354 D ಹಾಗೂ 509 ಅಡಿ ಕೇಸ್ ದಾಖಲು ಮಾಡಲಾಗಿದೆ.

ಸದ್ಯ ಎಸ್ಐಟಿ ತಂಡ ಸಂಸದ ಪ್ರಜ್ವಲ್ ಆಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ನಿಜಾಂಶ ಬಯಲು ಮಾಡಬೇಕಿದೆ. ಇತ್ತ, ಸಂಸದನ ಕಾಮ ಪುರಾಣದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

RELATED ARTICLES

Related Articles

TRENDING ARTICLES