Monday, May 13, 2024

ವಿಷಹಾರ ಸೇವಿಸಿ ಇಬ್ಬರು ಪುಟ್ಟ ಕಂದಮ್ಮಗಳು ಸಾವು, ಮೂವರು ಅಸ್ವಸ್ಥ

ರಾಯಚೂರು : ಆಡಿ ಬೆಳೆದು ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಇಬ್ಬರು ಪುಟ್ಟ ಕಂದಮ್ಮಗಳು ವಿಷಹಾರ ಸೇವಿಸಿ, ಅಸ್ವಸ್ಥರಾಗಿ ಇಹಲೋಕ ತ್ಯಜಿಸಿದ ಹೃದಯ ವಿದ್ರಾವಕ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರತಿ (7), ಪ್ರಿಯಾಂಕ್ (9), ಮೃತ ದುರ್ದೈವಿ ಮಕ್ಕಳು. ಹುಸೇನಮ್ಮ (35), ಮಾರುತಿ (40), ಲಕ್ಷ್ಮಣ್ (60) ಅಸ್ವಸ್ಥಗೊಂಡಿದ್ದಾರೆ.

ಮೂಲತ ಲಿಂಗಸಗೂರು ತಾಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿಗಳು. ಕೂಲಿ ಕೆಲಸಕ್ಕೆಂದು ವಡ್ಲೂರು ಗ್ರಾಮಕ್ಕೆ ಬಂದಿದ್ದರು. ಬ್ರಿಕ್ಸ್ (ಇಟ್ಟಿಗೆ) ತಯಾರಿಕೆ ಘಟಕದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ರಜೆ ನಿಮಿತ್ತ ಪೋಷಕರ ಬಳಿ ಇಬ್ಬರು ಮಕ್ಕಳು ಬಂದಿದ್ದರು. ಇನ್ನೂ ರಾತ್ರಿ ಊಟಕ್ಕೆ ಚಪಾತಿ, ಹೆಸರಕಾಳು, ಅನ್ನ, ಸಾಂಬಾರು ಸೇವಿಸಿದ್ದ ಮಕ್ಕಳು ಸೇರಿ ಕುಟುಂಬಸ್ಥರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡಿದೆ. ಕೂಡಲೇ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ಕರೆ ತರಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮಕ್ಕಳು ಹಸುನೀಗಿದ್ದಾರೆ. ಇನ್ನೂ ಮೂರು ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರೆದಿದೆ.

ಮಕ್ಕಳಲ್ಲಿ ಲೋ ಬಿಪಿ ಆಗಿರಬಹುದು

ಇನ್ನು ಈ ಬಗ್ಗೆ ರಿಮ್ಸ್ ಆಸ್ಪತ್ರೆಯ ವೈದ್ಯರು ಮಾತನಾಡಿ, ಒಂದೇ ಕುಟುಂಬದ ಎಲ್ಲರೂ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ಕರೆತರುವ ಒಳಗಾಗಿ ಎರಡು ಮಕ್ಕಳು ತುಂಬಾ ಅಸ್ವಸ್ಥಗೊಂಡಿದ್ದರು. ಹಾಗಾಗಿ ಚಿಕಿತ್ಸೆಗೆ ಸ್ಪಂದಿಸದೆ ಹಸುನೀಗಿದ್ದಾರೆ. ವಾಂತಿ, ಬೀದಿ ಆಗಿರುವ ಹಿನ್ನೆಲೆಯಲ್ಲಿ ಇದನ್ನು, ಫುಡ್ ಪಾಯಿಸನ್ ಅಂತ ಕನ್ಸಿಡರ್ ಮಾಡಲಾಗಿದೆ. ಮೃತಪಟ್ಟ ಮಕ್ಕಳಲ್ಲಿ ಲೋ ಬಿಪಿ ಆಗಿರಬಹುದು ಅಥವಾ ನೀರಿನ ಅಂಶ ಕಡಿಮೆಯಾಗಿ ಮೃತಪಟ್ಟಿರಬಹುದು. ಫುಡ್ ಪಾಯಿಸನ್ ನಂತರ 6 ಗಂಟೆಯವರೆಗೆ ಚಿಕಿತ್ಸೆ ಮಾಡಬಹುದು ಒಂದು ಬೆಳೆ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಮಕ್ಕಳು ಮೃತಪಡುವ ಎಲ್ಲಾ ಸಾಧ್ಯತೆಗಳು ಇರುತ್ತವೆ ಎಂದು ಹೇಳಿದರು.

ಹೆಚ್ಚು ನೀರು ಕುಡಿದರೆ ಇಂಥ ಘಟನೆ ದೂರ

ಒಟ್ಟಾರೆ, ಊರಿನಿಂದ ಶಾಲೆ ಮುಗಿಸಿ ರಜೆ ದಿನಗಳನ್ನು ಪೋಷಕರೊಂದಿಗೆ ಕಳೆಯಲು ಬಂದಿದ್ದ ಮಕ್ಕಳು ಇಲ್ಲದಂತಾಗಿದೆ. ಫುಡ್ ಪಾಯಿಸನ್ ಹೆಸರಿನ ವಿಧಿಯಾಟಕ್ಕೆ ಎರಡು ಕಂದಮ್ಮಗಳನ್ನು ಕಳೆದುಕೊಂಡ ತಾಯಿಯ ರೋದನೆ ಮುಗಿಲು ಮುಟ್ಟಿತ್ತು. ಆದ್ರೆ, ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪಧಾರ್ಥ ಬಳಸಿ, ಶುದ್ದ ನೀರಿನಲ್ಲಿ ಕೈ ತೊಳೆದು ಊಟ ಮಾಡಿ. ಹೆಚ್ಚು ನೀರು ಕುಡಿದರೆ ಇಂತಹ ಘಟನೆಗಳಿಂದ ದೂರ ಇರಬಹುದು ಎಂಬುದು ವೈದ್ಯರ ಸಲಹೆಯಾಗಿದೆ.

RELATED ARTICLES

Related Articles

TRENDING ARTICLES