Wednesday, May 8, 2024

ಧೋನಿ ‘ಎರಾ’ ಅಂತ್ಯ : IPLನಲ್ಲಿ MSD, ರೋಹಿತ್, ಕೊಹ್ಲಿ ‘ಲೆಜೆಂಡರಿ ನಾಯಕತ್ವ’ END

ಬೆಂಗಳೂರು : ಐಪಿಎಲ್‌ನಲ್ಲಿ ಒಂದು ಯುಗದ ಅಂತ್ಯ..! End of an Era in IPL..! ಧೋನಿ ಚೆನ್ನೈ ನಾಯಕನಲ್ಲ, ರೋಹಿತ್ ಶರ್ಮಾ ಮುಂಬೈ ನಾಯಕನಲ್ಲ, ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕನಲ್ಲ!

ಹೌದು, IPL ನಾಯಕರ ಫೋಟೋಶೂಟ್‌ನಲ್ಲಿ ಮೊದಲ ಬಾರಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಎಂ.ಎಸ್. ಧೋನಿ ಕಾಣಿಸಿಕೊಂಡಿಲ್ಲ. ಈ ಮೂಲಕ ಐಪಿಎಲ್​ನಲ್ಲಿ ಒಂದು ಯುಗದ ಲೆಜೆಂಡರಿ ನಾಯಕತ್ವ ಅಂತ್ಯವಾಗಿದೆ.

IPLನಲ್ಲಿ ನಾಯಕನಾಗಿ ಹೆಚ್ಚು ಟ್ರೋಫಿಗಳನ್ನು ಗೆದ್ದ ಇಬ್ಬರು ನಾಯಕರು ಒಬ್ಬ ಸಾಮಾನ್ಯ ಆಟಗಾರನಾಗಿ ಮೈದಾನದಲ್ಲಿ ಆಡುತ್ತಿದ್ದಾರೆ. ಎಂ.ಎಸ್. ಧೋನಿ 5 ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದರೆ, ರೋಹಿತ್ ಶರ್ಮಾ ಕೂಡ 5 ಬಾರಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಇದೀಗ ಐಪಿಎಲ್ ಇತಿಹಾಸದ ಇಬ್ಬರು ಲೆಜೆಂಡರಿ ನಾಯಕರು ತಮ್ಮ ನಾಯಕತ್ವದಿಂದ ದೂರ ಉಳಿದಿದ್ದಾರೆ.

ಐಪಿಎಲ್ 2024 ಆರಂಭಕ್ಕೂ ಮುನ್ನವೇ ಹಿರಿಯ ನಾಯಕ ಎಂ.ಎಸ್. ಧೋನಿ (42 ವರ್ಷ) ತಮ್ಮ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಧೋನಿ ಬದಲಿಗೆ ಋತುರಾಜ್ ಗಾಯಕ್ವಾಡ್ ಅವರನ್ನು ನೂತನ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಇನ್ನೂ, ಐಪಿಎಲ್ 2024 ಆವೃತ್ತಿಯಲ್ಲಿ ಅತ್ಯಂತ ಕಿರಿಯ ನಾಯಕನಾಗಿ ಶುಭ್ಮನ್ ಗಿಲ್ (24 ವರ್ಷ) ಹೊಸ ಯುಗ ಆರಂಭಿಸುತ್ತಿದ್ದಾರೆ.

ಅತ್ಯಂತ ಯಶಸ್ವಿ IPL ನಾಯಕರು

ಐಪಿಎಲ್​ ಇತಿಹಾಸದಲ್ಲಿ 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಏಕೈಕ ವ್ಯಕ್ತಿ (ನಾಯಕ) ಎಂದರೆ ಅದು ಮಹೇಂದ್ರ ಸಿಂಗ್ ಧೋನಿ. ಧೋನಿ ನಂತರ ರೋಹಿತ್ ಹಾಗೂ ಗಂಭೀರ್ ಹೆಚ್ಚು ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ.

  • ಎಂ.ಎಸ್. ಧೋನಿ : 133 ಗೆಲುವುಗಳು
  • ರೋಹಿತ್ ಶರ್ಮಾ : 87 ಗೆಲುವು
  • ಗೌತಮ್ ಗಂಭೀರ್ : 71 ಗೆಲುವು
  • ವಿರಾಟ್ ಕೊಹ್ಲಿ : 66 ಗೆಲುವು

IPLನಲ್ಲಿ ಎಂ.ಎಸ್. ಧೋನಿ ಶ್ರೇಷ್ಠ ಸಾಧನೆ

  • 2008 ರಲ್ಲಿ ಫೈನಲಿಸ್ಟ್
  • 2010 ರಲ್ಲಿ ಚಾಂಪಿಯನ್
  • 2011 ರಲ್ಲಿ ಚಾಂಪಿಯನ್
  • 2012 ರಲ್ಲಿ ಫೈನಲಿಸ್ಟ್
  • 2013 ರಲ್ಲಿ ಫೈನಲಿಸ್ಟ್
  • 2015 ರಲ್ಲಿ ಫೈನಲಿಸ್ಟ್
  • 2018 ರಲ್ಲಿ ಚಾಂಪಿಯನ್
  • 2019 ರಲ್ಲಿ ಫೈನಲಿಸ್ಟ್
  • 2021 ರಲ್ಲಿ ಚಾಂಪಿಯನ್
  • 2023 ರಲ್ಲಿ ಚಾಂಪಿಯನ್

RELATED ARTICLES

Related Articles

TRENDING ARTICLES