Friday, May 3, 2024

ರೈತನಿಂದ ಲಂಚ ಪಡೆಯುವಾಗ ರೆಡ್​ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ‘ಲೇಡಿ’ ತಹಶೀಲ್ದಾರ್

ತುಮಕೂರು : ಭೂ ಪರಿವರ್ತನೆ ಮಾಡಲು ರೈತನಿಂದ 30 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಲೇಡಿ ತಹಸೀಲ್ದಾರ್ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಗೀತಾ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಚಿ.ನಾ.ಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದ ರೈತ ಮಲ್ಲಿಕಾರ್ಜುನ್ ಅವರಿಗೆ ಸೇರಿದ 33 ಗುಂಟೆ ಜಮೀನನ್ನ ಭೂ ಪರಿವರ್ತನೆ ಮಾಡಿಕೊಡಲು 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬುಧವಾರ ಬೆಳಗ್ಗೆ ಮಲ್ಲಿಕಾರ್ಜುನ್ ಅವರಿಂದ 20 ಸಾವಿರ ಹಣ ಪಡೆದಿದ್ದ ತಹಸೀಲ್ದಾರ್ ಗೀತಾ, ಸಂಜೆ 30 ಸಾವಿರ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಮನೆಗೆ ಕರೆಸಿಕೊಂಡು ಲಂಚ ಪಡೆದ ಗೀತಾ

ಸಂಜೆ ರೈತ ಮಲ್ಲಿಕಾರ್ಜುನ್ ಅವರನ್ನು ತಹಸೀಲ್ದಾರ್ ಗೀತಾ ಅವರು, ಮನೆಗೆ ಕರೆಸಿಕೊಂಡು ಲಂಚ ಸ್ವೀಕರಿಸುವ ವೇಳೆ ತುಮಕೂರು ಲೋಕಾಯುಕ್ತ ಡಿವೈಎಸ್​ಪಿ ರಾಮಕೃಷ್ಣ ಹಾಗೂ ಉಮಾಶಂಕರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಸದ್ಯ ಗೀತಾ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ತಹಸೀಲ್ದಾರ್ ವಸತಿ ಗೃಹದಲ್ಲಿ ತನಿಖೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES