Friday, May 3, 2024

ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ, ಬೈಕ್​​ ವಶಕ್ಕೆ

ಕೋಲಾರ : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.5 ಲಕ್ಷ ಹಣ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಕ್ಕಿಪಿಕ್ಕಿ ಚೆಕ್​ ಪೋಸ್ಟ್​ ಬಳಿ ನಡೆದಿದೆ.

ಶಿಡ್ಲಘಟ್ಟದ ಗೋಪಾಲ್​ ಎಂಬುವವರಿಗೆ ಸೇರಿದ ಹಣ ಇದಾಗಿದ್ದು ಆಂಧ್ರದ ಮದನಪಲ್ಲಿಯಿಂದ ಶಿಡ್ಲಘಟ್ಟ ತಾಲೂಕಿನ ಬುಡಗವಾರಪಲ್ಲಿ ಗೆ ತೆಗೆದುಕೊಂಡು ಹೋಗುತ್ತಿದ್ದಾಗ ಇನ್ಸ್ಪೆಕ್ಟರ್​ ಜಯಾನಂದ್​ ನೇತೃತ್ವದಲ್ಲಿ ತಪಾಸಣೆ ನಡೆಸುವ ವೇಳೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.5 ಲಕ್ಷ ಹಣ ಮತ್ತು ದ್ವಿಚಕ್ರವಾಹನವನ್ನು ವಶಕ್ಕೆ ಪಡೆಯಲಾಗಿದ್ದು ರಾಯಲ್ಪಾಡು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಾರ್ಚ್​ 22ಕ್ಕೆ 5 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ: ಬಿಎಸ್​ ಯಡಿಯೂರಪ್ಪ

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಾಗು ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆಂದ್ರಪ್ರದೇಶ ಹಾಗು ಕರ್ನಾಟಕದ ಅಂತರಾಜ್ಯ ಚೆಕ್​ ಪೋಸ್ಟ್​ ಬಳಿ ಬಿಗಿ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ.

RELATED ARTICLES

Related Articles

TRENDING ARTICLES