Friday, May 3, 2024

ಈಶ್ವರಪ್ಪ ಪುತ್ರ ಕಾಂತೇಶ್​ಗೆ ಲೋಕಸಭಾ ಟಿಕೆಟ್​ ಮಿಸ್​: ಬಿಎಸ್​ವೈ ವಿರುದ್ದ ಅಭಿಮಾನಿಗಳಿಂದ ಪೋಸ್ಟರ್ ವಾರ್!

ಬೆಂಗಳೂರು : ಬಿಜೆಪಿ ಮುಖಂಡ ಕೆ.ಎಸ್​ ಈಶ್ವರಪ್ಪ ಪುತ್ರ ಕೆ.ಈ ಕಾಂತೇಶ್​ಗೆ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್​ ಕೈತಪ್ಪಿರುವ ಹಿನ್ನೆಲೆ ಈಶ್ವರಪ್ಪ ಅಭಿಮಾನಿಗಳಿಂದ ಮತ್ತು ಬೆಂಬಲಿಗರಿಂದ ಯಡಿಯೂರಪ್ಪ ವಿರುದ್ದ ಪೋಸ್ಟರ್ ವಾರ್ ಶುರುವಾಗಿದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡ ಕೆ.ಎಸ್​ ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್​ಗೆ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೇಟ್​ ಕೋರಿ ಮನವಿ ಮಾಡಿಕೊಂಡಿದ್ದರು. ಆದರೇ, ಹೈಕಮಾಂಡ್​ ಈ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಘೋಷಣೆ ಮಾಡಿರುವುದು ಈಶ್ವರಪ್ಪ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಮೈಸೂರು-ಕೊಡಗು ಜನತೆಗೊಂದು ಮೈಸೂರು ರಾಜ ಯದುವೀರ್ ಪತ್ರ

ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರಲ್ಲಿ ಬಿಎಸ್ ಯಡಿಯೂರಪ್ಪ ಹಾಗು ಕೆ ಎಸ್​ ಈಶ್ವರಪ್ಪ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಮತ್ತು ರಾಘವೇಂದ್ರ ಪಕ್ಷದಲ್ಲಿ ಉನ್ನತ ಸ್ಥಾನಗಳನ್ನು ಪಡೆದಿದ್ದು ಈಶ್ವರಪ್ಪಗೆ ಅನ್ಯಾಯ ಮಾಡಿದ್ದಾರೆ. ಇದರೊಂದಿಗೆ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ ಎಂದು ಈಶ್ವರಪ್ಪ ಅಭಿಮಾನಿಗಳು ಯಡಿಯೂರಪ್ಪ ವಿರುದ್ದ ನೇರ ಆರೋಪ ಮಡುವ ಮೂಲಕ ಪೋಸ್ಟರ್ ವಾರ್ ಶುರುಮಾಡಿದ್ದಾರೆ.

ಪಕ್ಷದ ವರಿಷ್ಠ ಯಡಿಯೂರಪ್ಪ ಪುತ್ರರಿಗೆ ಸಕಲ ರಾಜಕೀಯ ಸ್ಥಾನ-ಮಾನ ದೊರೆತ್ತಿದೆ. ಆದರೆ, ಪಕ್ಷ ನಿಷ್ಠ ಈಶ್ವರಪ್ಪ ಪುತ್ರನ ರಾಜಕೀಯ ಭವಿಷ್ಯ ಡೋಲಾಯಾಮಾನವಾಗಿದ್ದು ಪಕ್ಷ ಕಟ್ಟುವಾಗ ಎಲ್ಲರೂ ಬೇಕು.
ಅಧಿಕಾರ ಬಂದಾಗ ತನಗೆ, ತನ್ನ ಕುಟುಂಬಕ್ಕೆ ಮಾತ್ರ ಬೇಕು. ಎನ್ನುವ ಧೋರಣೆಯನ್ನು ಯಡಿಯೂರಪ್ಪ ಅನುಸರಿಸುತ್ತಿದ್ದಾರೆ. ಕಾಂತೇಶ್ ಬೆಳೆದರೆ, ವಿಜಯೇಂದ್ರ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂಬ ಬರಹಗಳ ಪೋಸ್ಟರ್ ಬಿಡುಗಡೆ ಮಾಡಿ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES