Friday, May 3, 2024

ಆಸ್ಕರ್ ವೇದಿಕೆಯಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸ ಪ್ರಶಸ್ತಿ ಕೊಡಲು ಬೆತ್ತಲಾಗಿ ಬಂದ ಡಬ್ಲ್ಯುಡಬ್ಲ್ಯುಇ ಸ್ಟಾರ್‌ ಜಾನ್‌ ಸೆನಾ

ಆಸ್ಕರ್ ಪ್ರಶಸ್ತಿಯನ್ನು ವಿಶ್ವಾದ್ಯಂತ ಚಲನಚಿತ್ರೋದ್ಯಮದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದ್ದು, ವಿವಿಧ ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಸದ್ಯ ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ 96ನೇ ಆಸ್ಕರ್ ಸಮಾರಂಭ ನಡೆದಿದೆ. ಈ ಸಮಾರಂಭದಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ನೀಡಲು ಜಾನ್‌ ಸೇನಾ ಬೆತ್ತಲಾಗಿ ಬಂದಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದೇವೆ.

ಹೌದು,ಕಾರ್ಯಕ್ರಮ ನಡೆಸಿಕೊಡುವ ಜಿಮ್ಮಿ ಕಿಮ್ಮೆಲ್‌ ಸೂಚನೆಯ ಮೇರೆಗೆ ಜಾನ್‌ ಸೆನಾ ಅವರು ನಗ್ನರಾಗಿ ಆಗಮಿಸಿ ಪ್ರಶಸ್ತಿ ನೀಡಿದ್ದಾರೆ.

ನಾನು ಬೆತ್ತಲಾಗಿ ಕುಸ್ತಿಯಾಡುವುದಿಲ್ಲ

ಡಬ್ಲ್ಯುಡಬ್ಲ್ಯುಇ ಕುಸ್ತಿಪಟು. ಕುಸ್ತಿಪಟುಗಳು ನಗ್ನರಾಗಿಯೇ ಕುಸ್ತಿಯಾಡಬೇಕು ಎಂದು ಕಿಮ್ಮೆಲ್‌ ಸೂಚಿಸಿದರು. “ನಾನು ಬೆತ್ತಲಾಗಿ ಕುಸ್ತಿಯಾಡುವುದಿಲ್ಲ.ಜೋರ್ಟ್ಸ್‌ ಬಳಸುವೆ” ಎಂದು ಹೇಳಿದರು. ಜೋರ್ಟ್ಸ್‌ ಬೆತ್ತಲೆಯಾಗುವುದಕ್ಕಿಂತ ಕೆಟ್ಟದಾಗಿರುತ್ತದೆ ಎಂದು ಕಿಮ್ಮೆಲ್‌ ಹೇಳಿದರು. ಇದಾದ ಬಳಿಕ ಒಂದು ಪುಟ್ಟ ಟವಲ್‌ನಷ್ಟು ಗಾತ್ರದ ಎನ್‌ವಲಪ್‌ ಕವರ್‌ ಅಡ್ಡ ಹಿಡಿದುಕೊಂಡು ಹಿಡಿದುಕೊಂಡು ಇವರು ನಗ್ನರಾಗಿಯೇ ವೇದಿಕೆಗೆ ಆಗಮಿಸಿದ್ದರು.

ಎನ್‌ವಲಪ್‌ ಕವರ್‌ ಮಾನಮುಚ್ಚಲು ಬಳಸಿಕೊಂಡಿದ್ದಾರೆ

ಕಾಸ್ಟ್ಯೂಮ್‌ ವಿನ್ಯಾಸದಲ್ಲಿ ಗೆಲುವು ಪಡೆದವರ ಹೆಸರು ಇರುವ ಎನ್‌ವಲಪ್‌ ಕವರ್‌ ಅನ್ನು ತನ್ನ ಮಾನಮುಚ್ಚಲು ಬಳಸಿಕೊಂಡಿದ್ದರು. ವೇದಿಕೆ ಮೇಲೆ ಜಾನ್‌ ಸಿನಾ ಅವರು “ವಸ್ತ್ರವಿನ್ಯಾಸ ತುಂಬಾ ಅಗತ್ಯ. ವಸ್ತ್ರಗಳು ತುಂಬಾ ಅಗತ್ಯ” ಎಂದು ಹೇಳಿದರು.

ಪೂವರ್‌ ಥಿಂಗ್ಸ್‌ ಸಿನಿಮಾದ ಹಾಲಿ ವೆಡ್ಡಿಂಗ್‌ಟನ್‌ ಅವರು ವಿನ್ನರ್‌

ಅತ್ಯುತ್ತಮ ವಸ್ತ್ರವಿನ್ಯಾಸ ವಿಭಾಗದಲ್ಲಿ ನಾಮನಿರ್ದೇಶನಗೊಂಡವರ ಹೆಸರನ್ನು ಜಾನ್‌ ಓದುವ ಸಮಯದಲ್ಲಿ ಎಲ್ಲಾ ಲೈಟ್‌ಗಳು ಡಿಮ್‌ ಆದವು. ಈ ಮೂಲಕ ಎನ್‌ವಲಪ್‌ಕವರ್‌ ತೆಗೆಯುವುದನ್ನು ಪ್ರೇಕ್ಷಕರು ನೋಡುವುದು ತಪ್ಪಿದೆ. ಪೂವರ್‌ ಥಿಂಗ್ಸ್‌ ಸಿನಿಮಾದ ಹಾಲಿ ವೆಡ್ಡಿಂಗ್‌ಟನ್‌ ಅವರು ವಿನ್ನರ್‌ ಎಂದು ಘೋಷಿಸಿದರು.

ಆಸ್ಕರ್‌ ವೇದಿಕೆಗೆ ಜಾನ್‌ ಸೆನಾ ಬೆತ್ತಲಾಗಿ ಬಂದಿರುವ ಸುದ್ದಿ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

 

RELATED ARTICLES

Related Articles

TRENDING ARTICLES