Monday, May 6, 2024

ಸಿಎಂ, ಡಿಸಿಎಂ, ಖರ್ಗೆ ಹೇಳಿದಂತೆ ನಾನು ಕೇಳ್ತೀನಿ : ಈಶ್ವರ್ ಖಂಡ್ರೆ

ಬೀದರ್ : ಮುಂಬರುವ ದಲಿತರಿಗೆ ಸಿಎಂ ಆಗುವ ಅವಕಾಶ ದೊರೆಯಲಿ ಎಂದಿರುವ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿಕೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜಾಣ್ಮೆಯ ಉತ್ತರ ನೀಡಿದರು.

ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನ ಕೊಟ್ಟಿದ್ದಾರೆ. ಸನ್ಮಾನ್ಯ ಸಿಎಂ, ಡಿಸಿಎಂ, ರಾಷ್ಟ್ರೀಯ ಅಧ್ಯಕ್ಷರು, ವರಿಷ್ಠರ ಹೇಳಿಕೆಗೆ ನಾನು ಬದ್ದನಾಗಿರುತ್ತೇನೆ ಎಂದು ಹೇಳಿದರು.

ಇದೇ ವೇಳೆ ಬಿ.ಆರ್. ಪಾಟೀಲ್ ಅಸಮಾಧಾನಕ್ಕೆ ಕ್ಷಮೆ ಕೋರಿದರು. ಬಿ.ಆರ್. ಪಾಟೀಲ್ ಹಿರಿಯರಿದ್ದಾರೆ, ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಸಿಎಂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರಿಗೆ ನೋವಾಗಿದ್ದಕ್ಕೆ ವಿಷಾಧ ವ್ಯಕ್ತಪಡಿಸುತ್ತೇನೆ. ಒಂದು ದಿನ ಮುಂಚಿತವಾಗಿಯೇ ಹೋಗಿ, ಅವರಿಗೆ ಶಿಷ್ಟಾಚಾರದ ಪ್ರಕಾರ ಮೊದಲ ಸಾಲಿನಲ್ಲೆ ಖುರ್ಚಿ ಹಾಕಿಸಿದ್ದೆ‌. ಅದಕ್ಕೆ ಅವರ ಹೆಸರನ್ನು ಅಂಟಿಸಿದ್ದನ್ನ ನೋಡಿಕೊಂಡೆ ಬಂದಿದ್ದೆ ಎಂದರು.

ಮನಸ್ಸಿನಲ್ಲಿ ಯಾವುದನ್ನು ಇಟ್ಟುಕೊಳ್ಳಬಾರದು

ಸಿಎಂ ಅವರನ್ನ ಸ್ವಾಗತ ಮಾಡಿಕೊಂಡು ಬರುವಾಗ ವಿಳಂಬ ಆಗಿದೆ. ಆ ಸಮಯದಲ್ಲಿ ಬಿ.ಆರ್ ಪಾಟೀಲ್ ಬಂದಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಕೊನೆಗೂ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಕಾರ್ಯಕ್ರಮ ಆಯೋಜನೆ ಮಾಡಿದವರಿಂದ ಅಚಾತುರ್ಯ ಆಗಿದೆ. ಘಟನೆ ಕುರಿತು ನಾನು ಅತ್ಯಂತ ವಿಷಾಧ ವ್ಯಕ್ತಪಡಿಸುತ್ತೇನೆ. ಮನಸ್ಸಿನಲ್ಲಿ ಯಾವುದನ್ನು ಇಟ್ಟುಕೊಳ್ಳಬಾರದು ಅಂತ ವಿನಂತಿ ಮಾಡ್ತೇನೆ. ಅವರ ಜೊತೆ ನೇರವಾಗಿ ಮಾತಾನಾಡ್ತೇನೆ ಎಂದು ಈಶ್ವರ್ ಖಂಡ್ರೆ ಹೇಳಿದರು.

RELATED ARTICLES

Related Articles

TRENDING ARTICLES