Friday, May 10, 2024

ಯಾರು ಯಾರೋ ಏನೇನೋ ಆಸೆ ಪಡ್ತಾರೆ, ಮಹದೇವಪ್ಪನವ್ರು ಆಸೆ ಪಡಲಿ : ಡಿ.ಕೆ. ಶಿವಕುಮಾರ್

ನವದೆಹಲಿ : ದಲಿತರಿಗೆ ಸಿಎಂ ಆಗುವ ಅವಕಾಶ ದೊರೆಯಲಿ ಎಂದಿರುವ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಂಚ್ ಕೊಟ್ಟಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯದಾಗಲಿ.. ಯಾರು ಆಸೆ ಪಡುವುದರಲ್ಲಿ ತಪ್ಪೇನಿಲ್ಲ. ಯಾರ್ ಯಾರೋ, ಏನೇನೋ ಆಸೆ ಪಡುತ್ತಾರೆ. ಹಾಗೆಯೇ ಮಹದೇವಪ್ಪನವರೂ ಆಸೆ ಪಡಲಿ ಎಂದು ಕುಟುಕಿದ್ದಾರೆ.

ನಾನು ಕೆಪಿಸಿಸಿ ಅಧ್ಯಕ್ಷ ಇದ್ದೇನೆ, ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ರಾಷ್ಟ್ರೀಯ ಅಧ್ಯಕ್ಷರು. ನಿನ್ನೆ ಮೀಟಿಂಗ್ ಆಗಿದೆ, ಮುಂದಿನ ವಿಚಾರಗಳ ಕುರಿತು ಚರ್ಚೆ ಆಗಿದೆ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಆಗಿದೆ. ಎಷ್ಟು ಸೀಟು ಕ್ಲಿಯರ್ ಆಗಿದೆ ಅಂತ ನಾನು ಹೇಳೋಕೆ ಆಗೋಲ್ಲ. ನಮ್ಮ AICC ನವ್ರು ಹೇಳ್ತಾರೆ ಆ ವಿಚಾರ. ಆದಷ್ಟು ಬೇಗ ಮೊದಲ ಪಟ್ಟಿ ಬಿಡುಗಡೆ ಆಗುತ್ತೆ. ಕರ್ನಾಟಕ ಸಂಬಂಧ 50% ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಖರ್ಗೆ ಇಡೀ ದೇಶ ಓಡಾಡಬೇಕು

ಲೋಕಸಭೆಗೆ ಖರ್ಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಅವ್ರು ನಮ್ಮ AICC ಅಧ್ಯಕ್ಷರು, ತುಂಬಾ ಜನ ಅವರ ಹೆಸರು ಹೇಳಿದ್ದಾರೆ. ಅವರ ಹೆಸರು ಒಂದೇ ಬಂದಿರುವುದು. ಆದ್ರೆ, ತೀರ್ಮಾನ ಅವರಿಗೆ ಬಿಟ್ಟಿದ್ದು. ಅವರು ಇಡೀ ದೇಶ ಓಡಾಡಬೇಕು, ಜವಾಬ್ದಾರಿ ಜಾಸ್ತಿ ಇದೆ. ನಿನ್ನೆ ಮೈಸೂರು ವಿಚಾರ ಚರ್ಚೆ ಆಗಿಲ್ಲ. ಸಿದ್ದರಾಮಯ್ಯ ಮಗ ಅಥವಾ ಸಚಿವರ ಸ್ಪರ್ಧೆ ವಿಚಾರ ನಾವು ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆ ಆಗಲಿ

ರಾಜ್ಯದ ಜನರಿಗೆ ಮಹಾಶಿವರಾತ್ರಿಯ ಶುಭಾಶಯ. ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆ ಆಗಲಿ. ಕಳೆದ ವರ್ಷ ನಾವು ಅನುಭವಿಸಿದ್ದ ಬರದಿಂದ ಮುಕ್ತಿ ಆಗಲಿ ಅಂತ ಶಿವನಲ್ಲಿ ಜನತೆ ಪರವಾಗಿ ಪ್ರಾರ್ಥನೆ ಮಾಡ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES