Friday, May 10, 2024

ರಾಜ್ಯದಲ್ಲಿ ಜಾತಿರಾಜಕಾರಣ ಎಬ್ಬಿಸುವ ಕುತಂತ್ರ ಕಾಂಗ್ರೆಸ್​​ ಮಾಡುತ್ತಿದೆ: ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ ಜಾತಿ ರಾಜಕಾರಣ ಕುತಂತ್ರ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚುನಾವಣೆ ಸಂದರ್ಭದಲ್ಲಿ ದಲಿತ ಸಿಎಂ ಆಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಹೆಚ್.ಸಿ.ಮಹದೇವಪ್ಪ ಚುನಾವಣೆ ಸಂದರ್ಭದಲ್ಲಿ ಮಾತ್ರ ಹೇಳ್ತಾರೆ. ಸರ್ಕಾರ ಅಧಿಕಾರ ಬಂದಾಗ ಸಿದ್ದರಾಮಯ್ಯ, ಡಿಕೆಶಿ ನಾನು ಸಿಎಂ ಆಗಬೇಕು ಅಂತಾ ಬಡಿದಾಡಿದ್ದರು. ಕಳೆದ ಎರಡು ದಿನಗಳಿಂದ ಡಿಕೆಶಿ ಬೆಂಬಲಿಗರು ಡಿಕೆಶಿ ಸಿಎಂ ಅಂತಾ ಶುರು ಮಾಡಿದ್ದಾರೆ. ಡಿಕೆಶಿ ಎಲ್ಲಿ ಸಿಎಂ ಆಗಿ ಬಿಡ್ತಾರೋ ಅಂತಾ ಹೆಚ್ ಸಿ ಮಹದೇವಪ್ಪ ದಲಿತ ಸಿಎಂ ಕೂಗು ಎಬ್ಬಿಸಿದ್ದಾರೆ ಪರಮೇಶ್ವರ ಅವರನ್ನು ಸಿಎಂ ಮಾಡ್ತೀವಿ ಅಂದ್ರೆ ಸಿದ್ದರಾಮಯ್ಯ, ಡಿಕೆಶಿ ಬೆಂಬಲಿಗರು ಮುಂದೆ ಬರುತ್ತಾರೆ ಕಾಂಗ್ರೆಸ್ ಗುಂಪುಗಾರಿಕೆಯಿಂದ ದಲಿತ ಸಿಎಂ ಮುಂದೆ ತರುತ್ತಿದ್ದಾರೆ ಇದು ರಾಜ್ಯದ ದಲಿತರಿಗೆ ಮಾಡ್ತಿರುವ ಮೋಸ ಎಂದು ಕಿಡಿಕಾರಿದ್ದಾರೆ.

ದಲಿತರ ಮುಖ್ಯಮಂತ್ರಿ ಮಾಡ್ತೀವಿ, ದಲಿತರ ಅಭಿಪ್ರಾಯ ಪಡೆಯುತ್ತೇವೆ ಎಂಬ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾನೆ ಇರುತ್ತಾರೆ. ಕಾಂಗ್ರೆಸ್ ಸ್ವಾತಂತ್ರ್ಯ ಬಂದ ದಿನದಿಂದ ದಲಿತ ಸಿಎಂ ಮಾಡ್ತೀವಿ ಅಂತಾ ಹೇಳುತ್ತಲೇ ಬಂದಿದೆ ಎಲ್ಲಾ ವರ್ಗದ ಜನ ಬಿಜೆಪಿ ಬೆಂಬಲಿಸುತ್ತಾರೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗ್ತಾರೆ ಎಂದರು.

ಚನ್ನಗಿರಿ ಶಾಸಕ ಹೇಳಿಕೆಯ ವಿಚಾರವಾಗಿ ಮಾತನಾಡಿದ ಅವರು,ಕಾಂಗ್ರೆಸ್ ಶಾಸಕರು ನಮ್ಮ ಸರಕಾರ ಇದೆ ನಮಗೆ ನಾಚಿಕೆ ಆಗ್ತಿದೆ ರಾಜೀನಾಮೆ ಕೊಡ್ತೀವಿ ಅಂತಾರಲ್ಲಈ ಮಾತನ್ನು ಸಿಎಂ ಡಿಸಿಎಂ ಮುಂದೆ ಹೇಳಲಿತಾಕತ್ ಇದ್ದರೆ ರಾಜೀನಾಮೆ ಕೊಡಿ.ಸುಮ್ಮನೆ ಗೊಂದಲ ಮಾಡುವ ಹೇಳಿಕೆ ಏಕೆ ಕೊಡ್ತೀರಾ..? ಪ್ರಚಾರ ತೆಗೆದುಕೊಳ್ಳುವ ಹೇಳಿಕೆ ಕೈಬಿಡಿ ಎಂದರು.

ಸಿದ್ದರಾಮಯ್ಯ ಪುಲ್ವಾಮ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,ಕಳೆದ ಬಾರಿ ಪುಲ್ವಾಮ ತೆಗೆದುಕೊಂಡಿದ್ದುಅದರಲ್ಲಿ ನಾವು ಯಶಸ್ವಿ ಆಗಲಿಲ್ವಾ..? ಈ ಬಾರಿ ರಾಮ ಮಂದಿರ ವಿಷಯ ತಂದಿದ್ದೇವೆ. ರಾಮಮಂದಿರ ಕಟ್ಟಿಲ್ವಾ ಸಿದ್ದರಾಮಯ್ಯ ಅವರಿಗೆ ಏಕೆ ಹೊಟ್ಟೆ ಉರಿ..? ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಪರ ಇದ್ದಾರೆ. ರಾಮೇಶ್ವರ ಕೆಫೆ ಬ್ಲಾಸ್ಟ್ ಆರೋಪಿಗಳ ಬಂಧಿಸಿ ಸಿದ್ದರಾಮಯ್ಯ ಕೇವಲ ಹೆಸರಿನಲ್ಲಿ ರಾಮನನ್ನು ಇಟ್ಟುಕೊಂಡರೆ ಆಗಲ್ಲ ಎಂದು ಕಿಡಿಕಾರಿದ್ದರು.

ಲೋಕಸಭಾ ಟಿಕೇಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ಬಾರಿ 25 ಸ್ಥಾನ ಬಿಜೆಪಿ ಗೆದ್ದಿತ್ತುಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಆಗಿದೆ. 28 ಸ್ಥಾನ ಗೆಲ್ಲುವ ಗುರಿ ಹೊಂದಿದೆ 28 ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿ ಈ ಬಾರಿ ಕಾಂಗ್ರೆಸ್ ಗೆ ಮುಖಭಂಗ ಆಗಲಿದೆ. ಆ ನಿಟ್ಟಿನಲ್ಲಿ ಅಭ್ಯರ್ಥಿ ಆಯ್ಕೆ ನಡೆಯಲಿದೆ  ಎಂದರು.

ಪುತ್ರ ಕಾಂತೇಶ್ ಗೆ ಟಿಕೇಟ್ ಸಿಗುವ ವಿಶ್ವಾಸವಿದೆ

ಅಲ್ಲಿನ ಮುಖಂಡರು,ಮಠಾಧಿಪತಿಗಳು ಅಪೇಕ್ಷೆ ಪಟ್ಟಿದ್ದಾರೆ ಕಾಂತೇಶ್ ಗೆ ಟಿಕೇಟ್ ಸಿಗುವ ವಿಶ್ವಾಸ ಇದೆ ಎಂದರು.

RELATED ARTICLES

Related Articles

TRENDING ARTICLES