Friday, May 3, 2024

ಚಿಕನ್ ಪ್ರಿಯರಿಗೆ ಶಾಕ್..! ಒಂದೇ ವಾರದಲ್ಲಿ ಕೆಜಿಗೆ 70 ರೂ. ಏರಿಕೆ

ಬೆಂಗಳೂರು : ಚಿಕನ್ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್. ಕೇವಲ ಒಂದೇ ವಾರದಲ್ಲಿ ಚಿಕನ್ ದರ ಬರೋಬ್ಬರಿ 70 ರೂ. ಏರಿಕೆಯಾಗಿದೆ.

ಹೌದು, ಈ ಬಾರಿ ನಿರೀಕ್ಷೆಗೂ ಮೀರಿ ಬಿಸಿಲ ಝಳ ಹೆಚ್ಚಾಗುತ್ತಿದೆ. ಇದು ಕುಕ್ಕುಟೋದ್ಯಮದ ಮೇಲೂ ಪರಿಣಾಮ ಬೀರಿದೆ. ಇದೇ ಚಿಕನ್ ದರ ಏರಿಕೆಗೆ ಕಾರಣವಾಗಿದೆ.

ಪೌಲ್ಟ್ರಿ ಫಾರಂನಲ್ಲಿ ಕೋಳಿಗಳು ಸಾಯುತ್ತಿದ್ದು, ಕೋಳಿ ಮಾಂಸ ಉತ್ಪಾದನೆ ಕುಸಿಯುತ್ತಿದೆ. ಹೀಗಾಗಿ, ಚಿಕನ್ ದರ ಏಕಾಏಕಿ ಏರಿಕೆಯಾಗಿದೆ. ಒಂದೇ ವಾರದಲ್ಲಿ ಕಿಲೋಗೆ 50 ರೂ.ನಿಂದ 70 ರೂ.ಗೆ ಏರಿಕೆಯಾಗಿದೆ. ಅಂದರೆ 180 ರೂ.ನಿಂದ 250 ರೂ. ಏರಿಕೆ ಕಂಡಿದೆ.

ಕೋಳಿಗಳು ಆಹಾರಕ್ಕಿಂತ ಹೆಚ್ಚಾಗಿ ನೀರು ಸೇವಿಸುತ್ತಿವೆ. ಇದರಿಂದಾಗಿ ಕೋಳಿಗಳ ತೂಕ ಸಹ ಕಡಿಮೆಯಾಗುತ್ತಿದೆ. ಇದು ಸಹ ಚಿಕನ್ ದರ ಹೆಚ್ಚಳವಾಗಲು ಮತ್ತೊಂದು ಕಾರಣವಾಗಿದೆ.

ಪೌಲ್ಟ್ರಿ ತಂಪಾಗಿರುವಂತೆ ನೋಡಿಕೊಳ್ಳಿ

ಬಿಸಿಲ ತಾಪದಿಂದ ಕೋಳಿಗಳು ನೀರು ಹೆಚ್ಚಾಗಿ ಸೇವಿಸುವುದರಿಂದ ಬೆಳವಣಿಗೆ ಕುಂಠಿತವಾಗುತ್ತದೆ. ಬೇಸಿಗೆಯಲ್ಲಿ ಸಾಯುವ ಪ್ರಮಾಣ ಹೆಚ್ಚಿರುತ್ತದೆ. ಹೀಗಾಗಿ, ಕೋಳಿ ಉತ್ಪಾದನೆ ಕುಸಿದಿದೆ. ಕೋಳಿಗಳನ್ನು ರಕ್ಷಿಸಿಕೊಳ್ಳಲು ಪೌಲ್ಟ್ರಿ ತಂಪಾಗಿರುವಂತೆ ನೋಡಿಕೊಳ್ಳಬೇಕು ಎಂದು ಪಶು ವೈದ್ಯರು ಸಲಹೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES