Friday, May 3, 2024

ರಾಮೇಶ್ವರಂ ಕೆಫೆ ಸ್ಫೋಟ : ಕಾಂಗ್ರೆಸ್ ನೀತಿ, ನಿಯತ್ತಿನಿಂದ ಕುಮ್ಮಕ್ಕು ಸಿಗುತ್ತಿದೆ : ಪ್ರಲ್ಹಾದ್ ಜೋಶಿ

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ನೀತಿ, ನಿಯತ್ತಿನಿಂದ ಕುಮ್ಮಕ್ಕು ಸಿಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಇವತ್ತು ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಘಟನೆ ದುರ್ದೈವದ ಸಂಗತಿ ಎಂದು ಹೇಳಿದರು.

ಘಟನೆಯಲ್ಲಿ ಮೂವರು ಗಾಯಾಳುಗಳ ಪರಿಸ್ಥಿತಿ ನೋಡಿದ್ವಿ. ಒಬ್ಬರಿಗೆ ಗಾಯ ಸ್ವಲ್ಪ‌ ಜಾಸ್ತಿ ಆಗಿದೆ. ಆಪರಷೇನ್ ಮಾಡಲಾಗಿದೆ. ಇನ್ನೂ ಇಬ್ಬರಿಗೂ ಚಿಕಿತ್ಸೆ ನಡೀತಿದೆ. ಅವರು ಔಟ್ ಆಫ್ ಡೇಂಜರ್ ಇದಾರೆ ಅಂತ ಡಾಕ್ಟರ್ ಹೇಳಿದ್ದಾರೆ. ಇಲ್ಲಿ ಕಾಂಗ್ರೆಸ್ ಸರ್ಕಾರದ ನೀತಿ, ನಿಯತ್ತಿನಿಂದ ಕುಮ್ಮಕ್ಕು ಸಿಗ್ತಿದೆ ಎಂದು ತಿಳಿಸಿದರು.

ನಾವು ತನಿಖೆಗೆ ಸಹಕಾರ ಕೊಡ್ತೀವಿ

ನಾಲ್ಕು ದಿನಗಳ ಹಿಂದೆ ಪಾಕಿಸ್ತಾನ್ ಜಿಂದಾಬಾದ್ ಅಂತ ಹೇಳಿದಾಗ ಅದನ್ನು ವಿರೋಧಿಸಿಲ್ಲ. ಇಂಡೈರೆಕ್ಟಾಗಿ ಅವರಿಗೆ ಕುಮ್ಮಕ್ಕು ಕೊಡುವ ರೀತಿ ಹೇಳಿಕೆ ಕೊಟ್ಟಿದ್ರು. ಈ ಹಿಂದೆ ಪಿಎಫ್ಐ ಅವರ ಮೇಲಿನ ಕೇಸ್​ಗಳೂ ವಾಪಸ್ ತೆಗೆದುಕೊಂಡ್ರು. ಇದು ತುಷ್ಟೀಕರಣ ರಾಜಕಾರಣ, ಇದರಿಂದಲೇ ಈ ರೀತಿ ಘಟನೆ ನಡೆದಿದೆ. ನಾವು ಸಹಕಾರ ಕೊಡ್ತೀವಿ, ತನಿಖೆಗೆ ಸಹಕಾರ ಕೊಡ್ತೀವಿ. ಎನ್ ಐಎ ವಿಚಾರವಾಗಿ ನಾವು ಸಹಕಾರ ಕೊಡ್ತೀವಿ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ಪ್ರಕರಣ NIAಗೆ ವರ್ಗಾವಣೆ ಮಾಡಬೇಕು

ಅಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿರುವುದು ನಿಜ. ಹರಿಪ್ರಸಾದ್ ಅವರ ಹೇಳಿಕೆ, ಇದೆಲ್ಲವನ್ನ ನೋಡ್ತಿದ್ರೆ ಇದೊಂದು ಕುಮ್ಮಕ್ಕು. ಮುಂಬೈ ಬ್ಲಾಸ್ಟ್, ಸ್ವಾಮಿ ನಾರಾಯಣ್, ದೆಹಲಿ ಘಟನೆಯಿಂದ ಪಾಕಿಸ್ತಾನ ನಮಗೆ ಶತೃ. ಇದೆಲ್ಲಾ ಗೊತ್ತಿದ್ರೂ ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಬಿಜೆಪಿಗೆ ಶತೃ ದೇಶ ಅಂತಾರೆ. ಹೀಗೆ ಹೇಳಿಕೆ ಕೊಡ್ತಿದ್ರೆ ಏನು ಅಂತಾರೆ? ಇದೆಲ್ಲವೂ ಕುಮ್ಮಕ್ಕು ಕೊಡೋದು. ಈ ರೀತಿ ಕಾನೂನು ಸುವ್ಯವಸ್ಥೆ ಹಾಳು ಮಾಡಲಾಗ್ತಿದೆ. ಕೇಸ್​ ಅನ್ನು ಎನ್​ಐಎಗೆ ವರ್ಗಾವಣೆ ಮಾಡಬೇಕು ಎಂದು ಪ್ರಲ್ಹಾದ್ ಜೋಷಿ ಒತ್ತಾಯಿಸಿದರು.

RELATED ARTICLES

Related Articles

TRENDING ARTICLES