Friday, May 3, 2024

ಬಸ್​ನಲ್ಲಿ ಬಂದು ರವೆ ಇಡ್ಲಿ ತಿಂದು, ಬಾಂಬ್ ಇಟ್ಟು ಹೋಗಿದ್ದಾನೆ : ಡಿ.ಕೆ. ಶಿವಕುಮಾರ್

ಬೆಂಗಳೂರು : ಶಂಕಿತ ಆರೋಪಿ ಬಸ್​ನಲ್ಲಿ ಬಂದು, ರಾಮೇಶ್ವರಂ ಕೆಫೆಯಲ್ಲಿ ರವೆ ಇಡ್ಲಿ ತಿಂದು ಬಾಂಬ್ ಇಟ್ಟು ಹೋಗಿದ್ದಾನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ಫೋಟ ಆಗಿರುವುದು ಬಾಂಬ್. ಆದರೆ, ಕಡಿಮೆ ಅಪಾಯವುಳ್ಳ ಟೈಮರ್ ಬಾಂಬ್ ಇಟ್ಟು ಹೋಗಿದ್ದಾನೆ. ಸ್ಫೋಟದ ಶಬ್ಧ ಹೆಚ್ಚು ಬಂದಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟ ಆಗಿರುವ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದರು.

35 ವರ್ಷದ ವ್ಯಕ್ತಿಯಿಂದ ಸ್ಫೋಟ ಕೃತ್ಯ

ಸುಮಾರು 35 ವರ್ಷದ ವ್ಯಕ್ತಿಯಿಂದ ಈ ಸ್ಫೋಟ ಕೃತ್ಯ ನಡೆದಿದೆ. ಬ್ಯಾಗ್ ಇಟ್ಟು ಒಂದು ಗಂಟೆ ಬಳಿಕ ಸ್ಪೋಟವಾಗಿದೆ. ಆರೋಪಿ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಲಾಗುತ್ತಿದೆ. ಅದೃಷ್ಟವಶಾತ್ ಗಾಯಾಳುಗಳು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಹೇಳಿದರು.

8 ಪೊಲೀಸರ ತಂಡದಿಂದ ಆರೋಪಿಗಾಗಿ ಹುಡುಕಾಟ

ಎಫ್​ಎಸ್​ಎಲ್ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ಸಿಸಿಬಿ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ. ಸಿಸಿಬಿಯ ಎಂಟು ಪೊಲೀಸರ ತಂಡದಿಂದ ಆರೋಪಿಗಾಗಿ ಶೋಧ ನಡೆಸುತ್ತಿದೆ. ಬೆಂಗಳೂರು ಸುರಕ್ಷಿತವಾಗಿದ್ದು, ಜನರು ಆತಂಕಕ್ಕೆ ಒಳಗಾಗೋದು ಬೇಡ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

RELATED ARTICLES

Related Articles

TRENDING ARTICLES