Wednesday, May 1, 2024

ಹೆಂಡ್ತಿ ದಪ್ಪ ಆಗ್ಲಿ ಅಂತ ಊಟದಲ್ಲಿ ವಿಷ ಹಾಕಿ ಕೊಂದ ಪಾಪಿ ಗಂಡ

ಬಳ್ಳಾರಿ: ಪ್ರೀತಿಸಿ ಮದುವೆಯಾಗಿ ಹೆಂಡತಿ ದಪ್ಪ ಆಗ್ಲಿಅಂತ ಔಷಧೀಯ ನೆಪದಲ್ಲಿಊಟದಲ್ಲಿ ವಿಷ ಬೆರಸಿ ಕೊಲೆ ಮಾಡಿರುವ ಘಟನೆ ಕೌಲಬಜಾರನಲ್ಲಿ ನಡೆದಿದೆ

ಹೌದು,ಪ್ರೀತಿಸಿ ಮದುವೆಯಾಗಿ ಐದು ವರ್ಷ ಸಂಸಾರ ಮಾಡಿದ್ದ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ. ಗಂಡ ಸಾಧಿಕ ಸಾಬ್ (25)ಆರೋಪಿ.

ಪ್ರೀತಿಸಿ ಮದುವೆಯಾಗಿದ್ದ ಸಾಧಿಕ್ ಸಾಬ್ ಮತ್ತು ಫರ್ಜಾನಾಭಿ, ಜೋಡಿ ಪ್ರೀತಿಗೆ ಆಸರೆಯಾಗಿ ಕೌಲಬಜಾರ್ ಸಾರ್ವಜನಿಕರೇ ಹಣ ಹೊಂದಿಸಿ ಪ್ರೀತಿಗೆ ಬೆಂಬಲಿಸಿ ಇವರ ಮದುವೆಯನ್ನು ಮಾಡಿಸಿದ್ದರು.ಪ್ರೀತಿಗೆ ಸಾಕ್ಷಿಯಾಗಿ ಈ ಜೋಡಿಗೆ ಎರಡು ಹೆಣ್ಣಮಕ್ಕಳು ಕೂಡ ಇದ್ದರು.

ಆದರೆ ಇವನಿಗೆ ಬೇರೆ ಹೆಣ್ನಿನ ಜೊತೆ ಅಕ್ರಮ ಸಂಬಂಧವಿತ್ತು.ಈ ಕಾರಣದಿಂದ ಪದೇ ಪದೇ ಪರ್ಜಾನಾಭಿಗೆ ನೀನು ಸಣ್ಣವಾಗಿದ್ದೀಯಾ ಎಂದು ಕಿರುಕುಳ ನೀಡುತ್ತಿದ್ದನು. ಪರ್ಜಾನಿಭಿಗೆ ತಂದೆ ಇಲ್ಲ, ಈಕೆ ಬಡತನ ಕುಟುಂಬದಿಂದ ಬಂದವಳು, ಬಡತನ ಇರುವ ಹಿನ್ನೆಲೆ ಗಂಡನಿಗೆ ಹೆದರಿ ಇವಳು ಜೀವನ ನಡೆಸುತ್ತಿದ್ದಳು.

ದಪ್ಪ ಆಗ್ಲಿಅಂತ ಔಷಧೀಯ ನೆಪದಲ್ಲಿಊಟದಲ್ಲಿ ವಿಷ ಬೆರೆಸಿದ್ಧಾನೆ. ಮೂರು ದಿನಗಳ ಕಾಲ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರ್ಜನಾಬಿ, ಇಂದು ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾಳೆ.ತಾಳಿ ಕಟ್ಟಿದ ಹೆಂಡತಿಗೆ ವಿಷವಿಟ್ಟ ಪಾಪಿ ಗಂಡ ಸಾಧಿಕ್ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಪೋಷಕರಿಂದ ದೂರು ನೀಡಿದ್ದಾರೆ.

ಸದ್ಯ ಈ ಪ್ರಕರಣ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

 

RELATED ARTICLES

Related Articles

TRENDING ARTICLES