Friday, May 10, 2024

BMTC Recruitment 2024: BMTC ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಹತ್ವ ಅದೇಶವೊಂದನ್ನು ಹೊರಡಿಸಿದೆ.

ಹೌದು,ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2,500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಅರ್ಜಿಯನ್ನು ಕೆಇಎ ವತಿಯಿಂದ ಆಹ್ವಾನಿಸಲಾಗಿದೆ. ಮಾರ್ಚ್ 10 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.ಏಪ್ರಿಲ್ 10 ರಂದು ಮುಕ್ತಾಯವಾಗಲಿದೆ. cetonline.karnataka.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ನೇಮಕಾತಿ ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಉದ್ಯೋಗ ಸಂಸ್ಥೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆ ಹೆಸರು : ನಿರ್ವಾಹಕ (ಕಂಡಕ್ಟರ್ )
ಹುದ್ದೆಗಳ ಸಂಖ್ಯೆ : 2500.

BMTC ಮಿಕ್ಕುಳಿದ ವೃಂದದಲ್ಲಿ 2286 (ಆರ್‌ಪಿಸಿ) ಹಾಗೂ ಸ್ಥಳೀಯ ವೃಂದ (ಹೈ-ಕ) 214 ಹುದ್ದೆಗಳಿದ್ದು ಒಟ್ಟಾರೆಯಾಗಿ ಮಹಿಳೆಯರಿಗೂ 825 ಹುದ್ದೆಗಳು ಮೀಸಲಿವೆ.

ವಿದ್ಯಾರ್ಹತೆ

ಪಿಯುಸಿ, ಸಿಬಿಎಸ್‌ಸಿ 10 + 2, ಮೂರು ವರ್ಷದ ಡಿಪ್ಲೋಮಾ ಅಥವಾ ಅದಕ್ಕೆ ಸಮಾನವಾದ ಶೈಕ್ಷಣಿಕ ಅರ್ಹತೆ ಜೊತೆಗೆ ‘ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್’ ಅನ್ನು ಹೊಂದಿದವರು ಅರ್ಜಿ ಸಲ್ಲಿಸಬಹುದು. ಬಾಹ್ಯ ಕೋರ್ಸ್ ಮತ್ತು ಜೆಒಸಿ ಕೋರ್ಸ್ ಮುಗಿಸಿದವರು ಅರ್ಹರಲ್ಲ.

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.

ಗರಿಷ್ಠ ಸಾಮಾನ್ಯ ವರ್ಗದವರಿಗೆ 35 ವರ್ಷಗಳು

2ಎ, 2ಬಿ, 3ಎ, 3ಬಿ ಗಳಿಗೆ 38 ವರ್ಷಗಳು,

ಎಸ್‌ಸಿ, ಎಸ್‌ಟಿ, ಪ್ರವರ್ಗ-1 ದವರಿಗೆ 40 ವರ್ಷಗಳು

ಮಾಜಿ ಸೈನಿಕರಿಗೆ 45 ವರ್ಷದವರೆಗೆ ಮಿತಿ ಇದೆ.

ಅರ್ಜಿ ಶುಲ್ಕ

ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗದವರಿಗೆ ₹700 ಮತ್ತು ಎಸ್‌ಸಿ, ಎಸ್‌ಟಿ, ಪ್ರವರ್ಗ 1, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 2500.

ಸಂದರ್ಶನ ಇರುವುದಿಲ್ಲ

ಅರ್ಜಿ ಸಲ್ಲಿಸಿದವರಿಗೆ ಲಿಖಿತ ಪರೀಕ್ಷೆ ಆ ನಂತರ ದೇಹದಾರ್ಡ್ಯತೆ ಪರೀಕ್ಷೆ ಇರಲಿದೆ. ಸಂದರ್ಶನ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನೀವು ಕೆಇಎ ಅಧಿಕೃತ ವೆಬ್‌ಸೈಟ್ ಪರಿಶೀಲಿಸಬಹುದು

RELATED ARTICLES

Related Articles

TRENDING ARTICLES