Wednesday, May 8, 2024

KAS ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌; 384 ಗೆಜೆಟೆಡ್ ಪ್ರೊಬೇಷನ‌ರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: KAS ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ ಕರ್ನಾಟಕ ಲೋಕಸೇವಾ ಆಯೋಗವು ಗುಡ್ ನ್ಯೂಸ್​ ನೀಡಿದೆ.

ಹೌದು. 2023-24 ನೇ ಸಾಲಿನ 384 ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್’ (KAS) ಗ್ರೂಪ್‌ “ಎ” ಮತ್ತು ಗ್ರೂಪ್‌ “ಬಿ” ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ.

ಅರ್ಜಿ ಸಲ್ಲಿಕೆ ಆರಂಭ

2024ರ ಮಾರ್ಚ್‌ 4ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್‌ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸದ್ಯ ಪೂರ್ವಭಾವಿ ಪರೀಕ್ಷಾ ದಿನಾಂಕವನ್ನು (ತಾತ್ಕಾಲಿಕ) ಪ್ರಕಟ ಮಾಡಲಾಗಿದ್ದು, 2024ರ ಮೇ 5ರಂದು ಪರೀಕ್ಷೆ ನಡೆಯಲಿದೆ.

ಅರ್ಜಿ ಶುಲ್ಕ

ಸಾಮಾನ್ಯ ವರ್ಗದವರಿಗೆ ₹600, ಪ್ರವರ್ಗ 2ಎ, 2ಬಿ, 3ಎ, 3ಬಿಗಳಿಗೆ ₹300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50 ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಒಟ್ಟು ಹುದ್ದೆ

ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ (ಹೈ ಕ) ಸೇರಿದಂತೆ ಒಟ್ಟಾರೆ 384 ಹುದ್ದೆಗಳಲ್ಲಿ ‘ಗ್ರೂಪ್ ಎ’ 159, ‘ಗ್ರೂಪ್ ಬಿ’ 225 ಹುದ್ದೆಗಳಿವೆ. ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಒಟ್ಟು 77,

ವಿದ್ಯಾರ್ಹತೆ

ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನವಾದ ವಿದ್ಯಾರ್ಹತೆಯನ್ನು ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹ.ಕನಿಷ್ಠ 21 ವರ್ಷ ವಯಸ್ಸು ಮೀರಿದವರು ಅರ್ಜಿ ಸಲ್ಲಿಸಲು ಅರ್ಹ. ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 38. ಪ್ರವರ್ಗ 2ಎ, 2ಬಿ, 3ಎ, 3ಬಿಗಳಿಗೆ 41 ವರ್ಷ, ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ.

ಪೂರ್ವಭಾವಿ ಪರೀಕ್ಷೆ (ಬಹುಆಯ್ಕೆ ಮಾದರಿಯ ಪ್ರಶ್ನೆಗಳು), ಮುಖ್ಯ ಪರೀಕ್ಷೆ (ವಿವರಣಾತ್ಮಕ) ಮತ್ತು ವ್ಯಕ್ತಿತ್ವ ಪರೀಕ್ಷೆ ಎಂಬ ಮೂರು ಹಂತಗಳಲ್ಲಿ ಈ ನೇಮಕಾತಿ ನಡೆಯಲಿದೆ. ವಿವರವಾದ ಅಧಿಸೂಚನೆಗೆ kpsc.kar.nic.in ಭೇಟಿ ನೀಡಬಹುದು.

ಈ ಸಹಾಯವಾಣಿಗೆ ಕರೆ ಮಾಡಿ

ಅರ್ಜಿ ಸಲ್ಲಿಸಲು ಸಮಸ್ಯೆಗಳು ಎದುರಾದಲ್ಲಿ ಹೆಲ್ಪ್‌ಲೈನ್‌ ನಂಬರ್‌ ನೀಡಲಾಗಿದ್ದು, 080-30574957 / 30574901 ಗೆ ಕರೆ ಮಾಡಲು ಸೂಚಿಸಲಾಗಿದೆ.

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಿ

ಅರ್ಜಿಗಳನ್ನು ಆನ್‌ಲೈನ್‌ (Online) ಮೂಲಕವೇ ಭರ್ತಿ ಮಾಡಿ ಭಾವಚಿತ್ರ/ಸಹಿ /ವಯೋಮಿತಿ/ ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತರ ಶುಲ್ಕವನ್ನು ನೆಟ್ ಬ್ಯಾಂಕಿಂಗ್ / ಡೆಬಿಟ್‌ ಕಾರ್ಡ್/ ಕ್ರೆಡಿಟ್‌ ಕಾರ್ಡ್‌/ ಯುಪಿಐ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು/ ಭಾವಚಿತ್ರ/ ಸಹಿಯನ್ನು ಅಪ್ಲೋಡ್ ಮಾಡದೇ ಇರುವ/ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಕೆಪಿಎಸ್‌ಸಿ ತಿಳಿಸಿದೆ.

ಜಾಗ್ರತೆಯಿಂದ ಅರ್ಜಿ ಸಲ್ಲಿಸಿ

ಸದರಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತುಗಳನ್ನು ಅವಶ್ಯಕ ಸಂದರ್ಭಗಳಲ್ಲಿ ಆಯೋಗವು ಪರಿಶೀಲನೆಗೆ ಒಳಪಡಿಸಬಹುದಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಜಾಗರೂಕತೆಯಿಂದ ತಮಗೆ ಅನ್ವಯಿಸುವ ಎಲ್ಲ ದಾಖಲೆಗಳನ್ನು ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ ಅಪ್‌ಲೋಡ್ ಮಾಡತಕ್ಕದ್ದು. ಮೂಲ ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಈಗಾಗಲೇ ಆನ್‌ಲೈನ್ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಿರುವ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸತಕ್ಕದ್ದು ಎಂದು ಕೆಪಿಎಸ್‌ಸಿ ಹೇಳಿದೆ.

 

RELATED ARTICLES

Related Articles

TRENDING ARTICLES