Sunday, April 28, 2024

Yuva Movie: ಯುವ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್​ಗೆ ಡೇಟ್ ಫಿಕ್ಸ್

ಬೆಂಗಳೂರು: ಕನ್ನಡ ಚಿತ್ರರಂಗದ  ಬಹುನಿರೀಕ್ಷಿತ ಸಿನಿಮಾ ಯುವ ಸಿನ್ಮಾದ ಫಸ್ಟ್ ಸಾಂಗ್​ ರಿಲೀಸ್​ಗೆ ಡೇಟ್​ ಫಿಕ್ಸ್​ ಆಗಿದೆ.

ಹೌದು, ಪವರ್ ಸ್ಟಾರ್​ ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜಕುಮಾರ್ ಅವರ ನಟನೆಯ ಯುವ ಸಿನಿಮಾ ಟೀಮ್​ನಿಂದ ಬಿಗ್ ಅಪ್ ಡೇಟ್ ಸಿಕ್ಕಿದೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸುತ್ತಿರುವುದರಿಂದ ಯುವ ಚಿತ್ರ ನಿರೀಕ್ಷೆ ಹೆಚ್ಚೇ ಇದೆ. ಈ ಸಿನಿಮಾದ ಕುರಿತು ಪ್ರಮುಖ ಅಪ್‌ಡೇಟ್‌ ಅನ್ನು ಹೊಂಬಾಳೆ ಫಿಲ್ಮ್ಸ್‌ ನೀಡಿದೆ. ಮಾರ್ಚ್‌ 2ರಂದು ವರನಟ ಡಾ.ರಾಜ್ ಕುಮಾರ್ ಅವರ ತವರು ಜಿಲ್ಲೆ ಚಾಮರಾಜನಗರದ ಟೆಂಪಲ್ ಮೈದಾನದಲ್ಲಿನಡೆಯುವ  ಕಾರ್ಯಕ್ರಮದಲ್ಲಿ  “ಒಬ್ಬನೇ ಶಿವ ಒಬ್ಬನೇ ಯುವ” ಎಂಬ ಹಾಡು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಹಲವು ಸೂಪರ್‌ಹಿಟ್‌ ಸಿನಿಮಾಗಳನ್ನು ಸ್ಯಾಂಡಲ್‌ವುಡ್‌ಗೆ ನೀಡಿದ ನಿರ್ದೇಶ ಸಂತೋಷ್ ಆನಂದ್‌ ರಾಮ್‌ ಯುವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯುವರತ್ನ, ರಾಘವೇಂದ್ರ ಸ್ಟೋರ್ಸ್‌ ಬಳಿಕ ಯುವ ಚಿತ್ರಕ್ಕೂ ಹೊಂಬಾಳೆ ಫಿಲಂಸ್‌ ಬಂಡವಾಳ ಹೂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ , ಶ್ರೀಶಾ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಕಾಂತಾರ ಬೆಡಗಿ ಸಪ್ತಮಿ ಗೌಡ ಯುವ ಜೊತೆಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES