Friday, May 10, 2024

ಶ್ರೀಮಠದಲ್ಲಿ ಮಾಘ ಮಾಸದ ಪೌರ್ಣಮಿ ಪ್ರಯುಕ್ತ ಶ್ರೀ ಲಲಿತಾ ಪರಮೇಶ್ವರಿ ಯಾಗ

ಶ್ರೀಮಠದಲ್ಲಿ ಮಾಘ ಮಾಸದ ಪೌರ್ಣಮಿ ಪ್ರಯುಕ್ತ 24-02-204 ಶನಿವಾರದಂದು ಶ್ರೀ ಲಲಿತಾ ಪರಮೇಶ್ವರಿಯ ಯಾಗವನ್ನು ಆಯೋಜಿಸಲಾಗಿದೆ. ಆಸಕ್ತ ಭಕ್ತಾದಿಗಳು ಈ ಯಾಗದಲ್ಲಿ ಭಾಗವಹಿಸಿ ಶುಭಫಲಗಳನ್ನು ಪಡೆದುಕೊಳ್ಳಬಹುದು ಎಂದು ಸಿದ್ದಲಿಂಗೇಶ್ವರ ಗದ್ದುಗೆ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಭಕ್ತಾದಿಗಳ ಸರ್ವದೋಷ ನಿವಾರಣೆಗಾಗಿ, ಸಮಸ್ತ ವಿಘ್ನಗಳ ನಿವಾರಣೆಗಾಗಿ, ಲೋಕಕಲ್ಯಾಣಕ್ಕಾಗಿ “ಶ್ರೀಲಲಿತಾ ಪರಮೇಶ್ವರಿಯ ಯಾಗ” ವನ್ನು ನೆರವೇರಿಸಬೇಕೆಂದು ಇಷ್ಟಕಾಮೇಶ್ವರಿ ದೇವಿಯ ಹಾಗೂ ಶ್ರೀ ಗುರು – ಸಿದ್ಧಲಿಂಗೇಶ್ವರರ ಅಪ್ಪಣೆಯಾಗಿದೆ.  ಆದರಿಂದ ಆಸಕ್ತ ಭಕ್ತಾದಿಗಳು ಈ ಯಾಗದಲ್ಲಿ ಭಾಗವಹಿಸಿ ಶುಭಫಲಗಳನ್ನು ನೀವು ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 6364167671ಕರೆ  ಮಾಡಬಹುದು. ಈ ಯಾಗಕ್ಕೆ ಸೇವಾ ಕಾಣಿಕೆಯನ್ನು ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ 6364167671 ಮೊಬೈಲ್ ಸಂಖ್ಯೆಗೆ ಸಂದಾಯ ಮಾಡಬಹುದು.

ಅನಾಥ ಮಕ್ಕಳಿಗೆ ಶ್ರೀಮಠದಲ್ಲಿ ಸಂಪೂರ್ಣ ಉಚಿತ ಶಿಕ್ಷಣ

“ಅನಾಥೋ ದೈವರಕ್ಷಕ” ಎಂಬಂತೆ ಶ್ರೀಮಠದ ವತಿಯಿಂದ ತಂದೆ ಇಲ್ಲದ, ತಾಯಿ ಇಲ್ಲದ ಅಥವಾ ತಂದೆ-ತಾಯಿ ಇಬ್ಬರೂ ಇಲ್ಲದಂತಹ ಮಕ್ಕಳಿಗೆ ಗುರುಕುಲ ಪದ್ಧತಿಯಂತೆ ಸನಾತನ ಪರಂಪರೆಯ ಶಾಸ್ತ್ರಾಧ್ಯಯನಗಳ ಜೊತೆಗೆ ಪ್ರಾಥಮಿಕ ಹಂತದ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣದ ಸಂಪೂರ್ಣ ವ್ಯವಸ್ಥೆಯನ್ನು ಮಾಡಲಾಗಿದೆ.

ಶ್ರೀಗಳವರ ಮಾರ್ಗದರ್ಶನದಂತೆ ನುರಿತ ಅಧ್ಯಾಪಕರುಗಳಿಂದ ಲೌಕಿಕ ಶಿಕ್ಷಣವನ್ನು ಹಾಗೂ ವೇದ ವಿದ್ವಾಂಸರುಗಳಿಂದ ಶಾಸ್ತ್ರಾಧ್ಯಯನವನ್ನು ಕಲಿಸಿಕೊಡಲಾಗುತ್ತಿದೆಲು ಅಭೆಯುಳ್ಳವರು, ಆಸರ್ತ ಪೋಷಕರು ತಮ್ಮ ಮಕ್ಕಳೊಂದಿಗೆ ಶ್ರೀಮಠವನ್ನು ಸಂಪರ್ಕಿಸುವುದು. ಹಾಗೂ ಅಗತ್ಯವಿರುವವರಿಗೆ ಈ ಸಂದೇಶವನ್ನು ತಲುಪಿಸಿ ಅವರ ಶಿಕ್ಷಣಕ್ಕೆ ಮತ್ತು ಮುಂದಿನ ಉಜ್ವಲ ಭವಿಷ್ಯಕ್ಕೆ ನೆರವಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಗುರುಕುಲ ವಿದ್ಯಾಭ್ಯಾಸ

ಶ್ರೀಮಠದ ವತಿಯಿಂದ ತಂದೆ ಇಲ್ಲದ, ತಾಯಿ ಇಲ್ಲದ ಅಥವಾ ತಂದೆ-ತಾಯಿ ಇಬ್ಬರೂ ಇಲ್ಲದಂತಹ ಮಕ್ಕಳಿಗೆ ಗುರುಕುಲ ಪದ್ಧತಿಯಂತೆ ಸನಾತನ ಪರಂಪರೆಯ ಶಾಸ್ತ್ರಾಧ್ಯಯನಗಳ ಜೊತೆಗೆ ಪ್ರಾಥಮಿಕ ಹಂತದ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣದ ಸಂಪೂರ್ಣ ವ್ಯವಸ್ಥೆಯನ್ನು ಮಾಡಲಾಗಿದೆ. ಶ್ರೀಗಳವರ ಮಾರ್ಗದರ್ಶನದಂತೆ ನುರಿತ ಅಧ್ಯಾಪಕರುಗಳಿಂದ ಲೌಕಿಕ ಶಿಕ್ಷಣವನ್ನೂ, ವೇದ ವಿದ್ವಾಂಸರುಗಳಿಂದ ಶಾಸ್ತ್ರಾಧ್ಯಯನವನ್ನು ಕಲಿಸಿಕೊಡಲಾಗುತ್ತಿದೆ.

ಗುರುಕುಲ ಪದ್ಧತಿಯಂತೆ ಶಿಕ್ಷಣವನ್ನು ಕಲಿಯಲು ಇಚ್ಛೆಯುಳ್ಳವರು, ಆಸಕ್ತ ಪೋಷಕರು ತಮ್ಮ ಮಕ್ಕಳೊಂದಿಗೆ ಶ್ರೀಮಠವನ್ನು ಸಂಪರ್ಕಿಸುವುದು. ಹಾಗೂ ಅಗತ್ಯವಿರುವವರಿಗೆ ಈ ಸಂದೇಶವನ್ನು ತಲುಪಿಸಿ ಅವರ ಶಿಕ್ಷಣಕ್ಕೆ ಮತ್ತು ಮುಂದಿನ ಉಜ್ವಲ ಭವಿಷ್ಯಕ್ಕೆ ನೆರವಾಗಬೇಕೆಂದು ವಿನಂತಿಸಿ ಕೊಳ್ಳುತ್ತೇವೆ. ಸನಾತದ ಧರ್ಮದ ಉಳಿವಿಗಾಗಿ ಸರ್ವರಿಗೂ ಶಿಕ್ಷಣದ ಅಗತ್ಯತೆ ಇದೆ ಎಂದು ತಿಳಿಸಿದ್ದಾರೆ.

 

 

RELATED ARTICLES

Related Articles

TRENDING ARTICLES