Sunday, April 28, 2024

ಸಿಎಂ ಅವಕಾಶವನ್ನು ಯಾರಾದ್ರು ಬೇಡ ಅಂತಾರಾ? : ಡಿಕೆಶಿಗೆ ರಾಜಣ್ಣ ಟಕ್ಕರ್

ದಾವಣಗೆರೆ : ಸಿಎಂ ಅವಕಾಶವನ್ನು ಯಾರಾದ್ರು ಬೇಡಾ ಅಂತಾರಾ? ಕಾಂಗ್ರೆಸ್​ನಲ್ಲಿ ಸಿಎಂ ಆಗೋಕೆ ಸಾಕಷ್ಟು ಜನರಿಗೆ ಆಸೆ ಇದೆ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಿಗೆ ಪರೋಕ್ಷವಾಗಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಟಕ್ಕರ್ ಕೊಟ್ಟಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ಸಮೀಪದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿಯಾದ ಮೇಲೆ ಪರಿಶಿಷ್ಟರು ಸಿಎಂ ಆಗಬೇಕೋ? ಹಿಂದುಳಿದವರು ಆಗಬೇಕೋ? ಬೇರೆ ಯಾರು ಆಗಬೇಕು ಎನ್ನುವ ಚರ್ಚೆಗೆ ಬರುತ್ತೆ ಎಂದು ಹೇಳಿದ್ದಾರೆ.

ಡಿಸಿಎಂ ಸ್ಥಾನ ಹೆಚ್ಚು ಮಾಡಬೇಕು ಎಂದು ಬಹುತೇಕ ಶಾಸಕ, ಸಚಿವರ ಅಭಿಪ್ರಾಯ. ಇನ್ನಷ್ಟು ಡಿಸಿಎಂ ಸ್ಥಾನ ಮಾಡಿದರೆ ಆ ಜಾತಿಯ ಮತಗಳು ಮತ್ತಷ್ಟು ಗಟ್ಟಿಯಾಗುತ್ತವೆ. ಬೆಂಗಳೂರಿಗೆ ಸುರ್ಜೇವಾಲ ಕೂಡ ಆಗಮಿಸಿದ್ದು, ಡಿಸಿಎಂ ಸ್ಥಾನ ಕೂಡ ಚರ್ಚೆ ಮಾಡಿದ್ವಿ. ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಕೂಡ ಚರ್ಚೆ ಮಾಡಿದ್ದೇವೆ. ನಮಗೆ ಬೇರೆ ಪಕ್ಷದವರ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

ಅಧಿಕಾರ ಹಂಚಿಕೆಗೆ 3 ಡಿಸಿಎಂ ಸ್ಥಾನ ಅಗತ್ಯವಿದೆ

ಜನವರಿ 11ರಂದು ದೆಹಲಿಗೆ ಎಲ್ಲಾ ಉಸ್ತುವಾರಿ ಸಚಿವರು ಕೂಡ ಹೋಗುತ್ತೇವೆ. ಎಲ್ಲಾ ಉಸ್ತುವಾರಿ ಸಚಿವರನ್ನು ಕೂಡ 11ನೇ ತಾರೀಖು 3 ಗಂಟೆಗೆ ಬರಲು ಹೇಳಿದ್ದಾರೆ. ನಮ್ಮದು ಡಿಸಿಎಂ ಒತ್ತಾಯ ನಿರಂತರವಾಗಿರೋದು. ಹೈಕಮಾಂಡ್ ಮುಂದೆ ಕೂಡ ಈ ವಿಷಯ ಇಟ್ಡಿದ್ದೇವೆ. ಎಲ್ಲರಿಗೂ ಅಧಿಕಾರವನ್ನು ಹಂಚಿಕೊಳ್ಳಲು ಈ ಡಿಸಿಎಂ ಸ್ಥಾನ ಅಗತ್ಯವಿದೆ ಎಂದು ಹೇಳಿದ್ದಾರೆ.

ಗಾಧೆ ಮಾತು ಹೇಳಿದ್ದೇನೆ ಕಾಂಟ್ರವರ್ಸಿ ಮಾಡಬೇಡಿ

ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಕ್ಯಾಂಡಿಡೇಟ್ ನಿಲ್ಲಿಸುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಏಕಾಂಗಿಯಾಗಿ ಲೋಕಸಭೆಯಲ್ಲಿ ಸ್ಪರ್ಧಿಸುತ್ತದೆ. ಜೆಡಿಎಸ್ ಜ್ಯಾತ್ಯತೀತ ಪಕ್ಷ ಅಂತ ಹೇಳಿ ಬಿಜೆಪಿ ಜೊತೆ ಸೇರಿದೆ. ಆಂಜನೇಯ ಹಗ್ಗ ತಿಂತಾ ಇರ್ತಾನೆ, ನಾವು ಹೋಗಿ ಹಪ್ಪಳ‌ ಕೇಳಿದ್ರೆ ಹೇಗೆ? ನಮ್ಮ ಪಕ್ಷದಲ್ಲೇ ಸಾಕಷ್ಟು ಜನ ಶಾಸಕರಿದ್ದಾರೆ, ಬೇರೆ ಪಕ್ಷದ ಶಾಸಕರು ಏಕೆ ಬೇಕು? ಗಾಧೆ ಮಾತು ಹೇಳಿದ್ದೇನೆ ಅದನ್ನೇ ಕಾಂಟ್ರವರ್ಸಿ ಮಾಡಬೇಡಿ ಎಂದು ರಾಜಣ್ಣ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES