Tuesday, May 14, 2024

ಪ್ರಜ್ವಲ್ ಜೊತೆ ರೇವಣ್ಣಗೂ ಸಂಕಷ್ಟ : ಅಪ್ಪ ಆರೋಪಿ ನಂ.1, ಮಗ ಆರೋಪಿ ನಂ.2

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕಾಮ ಪುರಾಣ ಬಗೆದಷ್ಟು ಬಯಲಾಗ್ತಿದೆ. ಸಂತ್ರಸ್ತೆಯರು ಕೊಟ್ಟ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಾಗಿದೆ.

ತಂದೆ ಹೆಚ್​.ಡಿ. ರೇವಣ್ಣ ಎ1 ಆರೋಪಿ ಆಗಿದ್ರೆ, ಪುತ್ರ ಪ್ರಜ್ವಲ್​ ಎ2 ಆರೋಪಿ ಆಗಿದ್ದಾರೆ. ಅಷ್ಟಕ್ಕೂ ಸಂತ್ರಸ್ತೆಯರ ಆರೋಪಗಳೇನು..? ಎಫ್​ಐಆರ್​​ನಲ್ಲಿ ಏನೆಲ್ಲಾ ಅಂಶಗಳಿವೆ? ಎಲ್ಲಿದೆ ನೋಡಿ ಕಂಪ್ಲೀಟ್​ ಡಿಟೈಲ್ಸ್.

ಸಂತ್ರಸ್ತೆಯರು ಪವರ್​ಟಿವಿಯಲ್ಲಿ ತಮಗಾದ ನೋವನ್ನ ಎಳೆ ಎಳೆಯಾಗಿ ಬಿಚ್ಚಿಟ್ರು. ಬಳಿಕ ಹೊಳೆನರಸೀಪುರ ನಗರ ಠಾಣೆಗೆ ಸಂತ್ರಸ್ತ ಮಹಿಳೆಯರು ದೂರು ನೀಡಿದ್ದು, ತಮ್ಮ ಮೇಲಿನ ದೌರ್ಜನ್ಯದ ಬಗ್ಗೆ ಪಿನ್​ ಟು ಪಿನ್​ ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಹೆಚ್​.ಡಿ. ರೇವಣ್ಣ ಮೊದಲ ಆರೋಪಿಯಾದ್ರೆ, ಆರೋಪಿ ನಂಬರ್​ 2 ಪ್ರಜ್ವಲ್ ರೇವಣ್ಣ. ಈ ಮೂಲಕ ಅಪ್ಪ-ಮಗ ಇಬ್ಬರ ವಿರುದ್ಧವೂ ಲೈಂಗಿಕ ದೌರ್ಜನ್ಯ ಪ್ರಕರಣದಡಿ ಎಫ್​ಐಆರ್​ ದಾಖಲಾಗಿದೆ.

ಅಂದಹಾಗೆ, ಸಂತ್ರಸ್ತೆ ಗಂಡನಿಗೆ ತಮ್ಮ ಡೈರಿಯಲ್ಲಿ ಕೆಲಸ ಕೊಡಿಸಿದ್ದ ರೇವಣ್ಣ, ಬಳಿಕ 2015ರಲ್ಲಿ ಆ ಮಹಿಳೆಯನ್ನ  ಹಾಸ್ಟೆಲ್​ ಒಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿಸಿದ್ದರು. ನಂತರ ತಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬರುವಂತೆ ಹೇಳಿದ್ದರು. ಅಡುಗೆ ಕೆಲಸಕ್ಕೆ ಸೇರಿಸಿಕೊಂಡ ಮೇಲೆ ರೇವಣ್ಣ ತಮ್ಮ ಅಸಲಿ ಮುಖ ತೋರಿಸಿದ್ದಾರೆ.

ಅಷ್ಟಕ್ಕೂ ಹೆಚ್​.ಡಿ. ರೇವಣ್ಣ ಹಾಗೂ ಪ್ರಜ್ವಲ್​ ರೇವಣ್ಣ ವಿರುದ್ಧ ಸಂತ್ರಸ್ತ ಮಹಿಳೆಯರು ಮಾಡಿರೋ ಆರೋಪಗಳೇನು? ಇಲ್ಲಿದೆ ನೋಡಿ.

ಅಪ್ಪಮಗನ ಕಾಮಪುರಾಣ..!

  • ಆರೋಪ 1 : ರೂಮ್​ಗೆ ಬರುವಂತೆ ರೇವಣ್ಣ ನಮ್ಮನ್ನ ಕರೆಯುತ್ತಿದ್ದರು
  • ಆರೋಪ 2 : ಸ್ಟೋರ್ ರೂಮ್​ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು
  • ಆರೋಪ 3 : ಹಣ್ಣು ಕೊಡೋ ನೆಪದಲ್ಲಿ ಕೈ ಹಿಡಿದು ಎಳೆದಾಡುತ್ತಿದ್ದರು
  • ಆರೋಪ 4 : ಎಣ್ಣೆ ಹಚ್ಚಲು ಕರೆದು ಲೈಂಗಿಕ ದೌರ್ಜನ್ಯ ನಡೆಸ್ತಿದ್ದರು
  • ಆರೋಪ 5 : ಸೀರೆಯ ಪಿನ್ ಕಿತ್ತು, ಲೈಂಗಿಕ ದೌರ್ಜನ್ಯ ನಡೆಸಿದ್ದರು
  • ಆರೋಪ 6 : ಭವಾನಿ ಇಲ್ಲದ ವೇಳೆ ನಮಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದರು
  • ಆರೋಪ 7 : ಪ್ರಜ್ವಲ್ ಹಿಂಬದಿಯಿಂದ ಬಂದು ಮೈ‌ಮುಟ್ಟಿ ಹೊಟ್ಟೆ ಜಿಗುಟುತ್ತಿದ್ದರು
  • ಆರೋಪ 8 : ವಿಡಿಯೋ ಕಾಲ್ ಮಾಡಿ ಮಗಳ ಜೊತೆ ಅಸಭ್ಯವಾಗಿ ಮಾತನಾಡ್ತಿದ್ದರು

ಇಟ್ರೆಂಸ್ಟಿಂಗ್​ ವಿಚಾರವೆಂದ್ರೆ, ದೂರುದಾರೆ ಭವಾನಿ ರೇವಣ್ಣ ಸೋದರತ್ತೆ ಮಗಳು. ತಂದೆ ಮಗ ಇಬ್ಬರ ವಿರುದ್ಧವೂ ಮನೆ ಕೆಲಸದಾಕೆ ದೂರು ದಾಖಲಿಸಿದ್ದಾರೆ. ಅದೇ ದೂರು ಆಧರಿಸಿ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಇದೀಗ ಪೊಲೀಸರು ಮುಂದಿನ ಪ್ರಕ್ರಿಯೆಗಳನ್ನ ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES