Monday, May 13, 2024

ಇವನೇ ಓದಿಲ್ಲ, ಅ ಆ ಇ ಈ ಬರಲ್ಲ : ಪ್ರಕಾಶ್ ರಾಜ್

ರಾಯಚೂರು : ಇವನೇ ಓದಿಲ್ಲ. ಅ ಆ ಇ‌ ಈ ಬರಲ್ಲ. ರೈತರ ಮಹತ್ವ ಹೇಗೆ ಗೊತ್ತಾಬೇಕು ಇವನಿಗೆ? ಎಂದು ಏಕವಚನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೂವಿನ ಹತ್ತಿರ ಹೋದ್ರೆ ಪರಿಮಳ, ಸುವಾಸನೆ ಬರುತ್ತೆ. ಇವನ ಹತ್ತರಿ ಹೋದ್ರೆ ಗಬ್ಬುನಾಥ ಬರುತ್ತೆ ಎಂದು ಲೇವಡಿ ಮಾಡಿದ್ದಾರೆ.

ದೇಶದ ಇಂದಿನ ಸ್ಥಿತಿಗೆ ಈ ಸರ್ಕಾರ ಮಾತ್ರವಲ್ಲ, ಈ ಹಿಂದಿನ ಸರ್ಕಾರಗಳು ಕಾರಣ. ನಾವು ಕಾಯಕ ಕಲ್ಯಾಣ ಮಾಡ್ತಿವಿ. ಆದ್ರೆ, ಬಿಜೆಪಿ ಅವರು ಕಾವಿ ಕಲ್ಯಾಣ ಮಾಡುತ್ತಿದ್ದಾರೆ. ಮಹಾಪ್ರಭುಗಳು ಇಲ್ಲೇ ಪ್ರಚಾರಕ್ಕೆ ಬಂದಿದಾರೆ. ತಾಯಿ, ತಂದೆ, ಮಗನಿಗೆ ಇರುವ ಸಂಬಂಧ ನನಗೆ ರೈತರಿಗೆ ಇದೆ ಎಂದು ಹೇಳಿದ್ದಾರೆ.

ರೈತನ ಮಗ‌ ಈಗ ರೈತನಾಗಲ್ಲ ಅಂತಿದಾನೆ

ಕಾಲ ಕಾಲದಿಂದ ರೈತರಿಗೆ ಕೊಡೋದು ಭಿಕ್ಷೆ ಅಂದುಕೊಂಡಿದ್ದಾರೆ. ಆದ್ರೆ, ರೈತರು ಘನತೆ ಕೇಳ್ತಿದ್ದಾರೆ. ರೈತನ ಮಗ‌ ಈಗ ರೈತನಾಗಲ್ಲ ಅಂತಿದಾನೆ. ಇಷ್ಟು ದೊಡ್ಡ ಭಾರತದಲ್ಲಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ನನಗೆ ಯಾರೂ ಇಲ್ಲ ಅಂತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಹಾಪ್ರಭುಗಳಿಗೆ ಅರ್ಥ ಆಗುತ್ತಾ..? ಮಹಾಪ್ರಭುವಿನ ಸರ್ಕಾರದಲ್ಲಿ ಏನೂ‌ ಮಾಡಲ್ಲ. ಅವನಲ್ಲಿ ಪರಿವಾರ ಇಲ್ಲ ಎಂದು ಟೀಕಿಸಿದ್ದಾರೆ.

ನಾನು ಕ್ಯಾಮೆರಾ ಮುಂದೆ ನಟನೆ ಮಾಡೋನು

ರೈತರ ಬಗ್ಗೆ ಗೊತ್ತಿಲ್ಲ, ಹಳ್ಳಿಗಳ ಬಗ್ಗೆ ಅವನಿಗೆ ಗೊತ್ತಿಲ್ಲ. ಹಳ್ಳಿಗಳನ್ನು ದತ್ತು ತಗೊಂಡು ಮಾಡೆಲ್ ಮಾಡ್ತಿವಿ ಅಂದ್ರು. ನಿಮ್ಮ ಜನ್ಮಕ್ಕೆ, ಕರ್ಮಕ್ಕೆ ಒಂದಾದ್ರೂ ಹಳ್ಳಿ ಮಾಡಿದಿರಾ..? ನಾನು ಕ್ಯಾಮೆರಾ ಮುಂದೆ ನಟನೆ ಮಾಡೋನು. ಇವನು ಜನರ ಜೀವನದ ಜೊತೆ ನಟನೆ ಮಾಡ್ತಾನೆ. ನೀನು ಕೊಟ್ಟ ಮಾತನ್ನು ನಾವು ನೆನಪು ಮಾಡಿದ್ರೆ ಅದು ದೇಶ ದ್ರೋಹನಾ..? 10 ಲಕ್ಷ ಎಕರೆ ಚೀನಾ ಒತ್ತುವರಿ ಮಾಡಿದೆ. ಇವನನ್ನು ನಾವು ಉಳಿಸಿಕೊಳ್ಳಬೇಕಾ..? ಎಂದು ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES