Friday, May 3, 2024

ಅಶೋಕ್ ನಾಮಫಲಕ ಇರೋವರೆಗೂ ವಿಪಕ್ಷ ನಾಯಕನ ಕೊಠಡಿಗೆ ಕಾಲಿಡಲ್ಲ: ಬಿಜೆಪಿ ಶಾಸಕ ವಿಶ್ವನಾಥ್

ಬೆಳಗಾವಿ: ಅಶೋಕ್  ಹೆಸರಿನ ನಾಮಫಲಕ ಇರೋವರೆಗೂ ವಿಪಕ್ಷ ನಾಯಕನ ಕೊಠಡಿಗೆ ನಾನು ಕಾಲಿಡಲ್ಲ ಎಂದು ಬಿಜೆಪಿ ಶಾಸಕ ಎಸ್‌ ಆರ್ ವಿಶ್ವನಾಥ್ ಅಸಮಾಧಾನನ ವ್ಯಕ್ತಪಡಿಸಿದ್ದಾರೆ. 

ಬಿಜೆಪಿಯಲ್ಲಿ ಭಿನ್ನಮತ ದಿನದಿಂದ ದಿನಕ್ಕೆ ಅಸಮಾಧಾನ ಭುಗಿಲೆದ್ದಿದ್ದು ಇದರ ನಡುವೆ ತಿಪಕ್ಷ ನಾಯಕ ಆರ್.ಅಶೋಕ್ ಕೊಠಡಿಗೆ ಹೋಗಲು ವಿಶ್ವನಾಥ್ ಮತ್ತೆ ನಿರಾಕರಿಸಿದ್ದಾರೆ.

ಇಂದು ಬೆಳಗ್ಗೆ ‘ಕ್ಲೋಸ್ಡ್ ಡೋರ್ ಮೀಟಿಂಗ್’ ನಡೆಯುತ್ತಿದ್ದ ಸಂದರ್ಭ ಶಾಸಕ ಮುನಿರತ್ನ, ವಿಶ್ವನಾಥ್ ಅವರನ್ನು ಅಶೋಕ್ ಕೊಠಡಿಗೆ ಕರೆದೊಯ್ಯಲು ಕೈ ಹಿಡಿದುಕೊಂಡರು. ಈ ವೇಳೆ, ವಿಶ್ವನಾಥ್ ಅವರು, “ಅಶೋಕ್ ಹೆಸರಿನ ನಾಮಫಲಕ ಇರುವವರೆಗೂ ನಾನು ಆ ಕೊಠಡಿಗೆ ಕಾಲಿಡುವುದಿಲ್ಲ.ಬೇಕಾದರೆ ನಾಮಫಲಕ ತೆಗೆಯಲಿ, ಆಗ ಹೋಗುತ್ತೇನೆ” ಎಂದು ಕಡ್ಡಿ ಮುರಿದಂತೆ ಹೇಳಿ ಕೊಠಡಿ ಮುಂಭಾಗದ ಮೊಗಸಾಲೆಯಲ್ಲಿ ಕುಳಿತಿದ್ದಾರೆ.

 ನೀವು ಈ ಓದಿದ್ದೀರಾ? ಅನೈತಿಕ ಸಂಬಂಧಕ್ಕೆ ಅಡ್ಡಿ: ಪತ್ನಿಗೆ ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ ಪಾಪಿ ಗಂಡ

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದ್ದರೆ, ವಿಪಕ್ಷ ಬಿಜೆಪಿಯೊಳಗಿನ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

RELATED ARTICLES

Related Articles

TRENDING ARTICLES