Sunday, December 8, 2024

ನಿಮ್​ ಮನೆ ಬೆಕ್ಕು ನಾಯಿಗೂ ಹುದ್ದೆ ಕೂಡಿ : ಯತ್ನಾಳ್ ಕಿಡಿ

ವಿಜಯಪುರ: ವಿಪಕ್ಷ ನಾಯಕನ ಆಯ್ಕೆ ನಂತರ ಮತ್ತೆ ಬಿಜೆಪಿನ ಶಾಸಕ ಬಸನಗೌಡ ಯತ್ನಾಳ್​ ಗುಡುಗಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು ನಮ್ಮ ಪಕ್ಷದಲ್ಲಿ ಇರುವ ಹುದ್ದೆಗಳನ್ನ ತಮ್ಮ ಮಕ್ಕಳಿಗೆ ಕೊಡಲಿ ಅಥವಾ ಇನ್ನೂ ಏನಾದ್ರೂ ಇದ್ರೆ ತಮ್ಮ ಮನೆಯ ಬೆಕ್ಕುಗಳಿಗೆ ನೀಡಲಿ ಎಂದು ಎಂದು ಗುಡುಗಿದ್ದಾರೆ.

ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ಬಳಿಕ ಬಸನಗೌಡ ಪಾಟೀಲ್​ ಯತ್ನಾಳ್​  ಕೆಂಡದಂತಾಗಿದ್ದು, ನಮ್ಮ ಮನೆಗೆ ಬರಬೇಡ ಎಂದು ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಮಗ ಬಿವೈ​ ವಿಜಯೇಂದ್ರ ಅವರಿಗೆ ಅಧ್ಯಕ್ಷ ಪಟ್ಟ ಸಿಕ್ಕಿದ್ದಕ್ಕೆ ಬಿಎಸ್​ ಯಡಿಯೂರಪ್ಪ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾವು ಬೆಂಗಳೂರು ಜಿಲ್ಲೆಯವರು, ಎಲ್ಲದಕ್ಕೂ ಕಾಲ ಕೂಡಿ ಬರುತ್ತದೆ : ಡಿ.ಕೆ. ಶಿವಕುಮಾರ್

ಮೊದಲು ಮಾಜಿ ಮುಖ್ಯಮಂತ್ರಿ ಅಂತಿದ್ದರು. ಮುಖಭಂಗ ಆಗುತ್ತೆ ಅಂತಾ ಈಗ ನಿಕಟಪೂರ್ವ ಎಂದು ಹೇಳುತ್ತಾರೆ. ಅಪ್ಪ, ಮಗ ನಾಟಕ ಮಾಡಬೇಡಿ ಈ ಎಲ್ಲಾ ನಾಟಕ ಮಾಡೋದು, ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಯಾಕಂದ್ರೆ ಆ ಖುರ್ಚಿ ಬಿಡಬಾರದು‌ ಅಂತ. ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಇನ್ನು ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಟ್ಟು ಬಿಡಿ ಅಂತ ಹೇಳಿದ್ದೇನೆ. ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಅಂತ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

 

RELATED ARTICLES

Related Articles

TRENDING ARTICLES