Wednesday, May 8, 2024

PSI ಮರುಪರೀಕ್ಷೆ ಮುಂದೂಡಲು ಶಾಸಕರಿಂದ ಮನವಿ

ಕಲಬುರಗಿ: PSI ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ PSI ಹುದ್ದೆಗಳ ಮರುಪರೀಕ್ಷೆ ದಿನಾಂಕ ಮುಂದೂಡಲು ಶಾಸಕರು ಮನವಿ ಮಾಡಿದ್ದಾರೆ.

MLC ಶರಣಗೌಡ ಪಾಟೀಲ್ ಬಯ್ಯಾಪುರ ಮತ್ತು ಬಸನಗೌಡ ತುರವಿಹಾಳ ಮನವಿ ಮಾಡಿದ್ದಾರೆ. ಮರುಪರೀಕ್ಷೆ ಮುಂದೂಡುವಂತೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯಗೆ ಶಾಸಕರು ಪತ್ರ ಬರೆದಿದ್ದಾರೆ.

ಡಿಸೆಂಬರ್ 23ರಂದು PSI ಹುದ್ದೆಗಳ ನೇಮಕಾತಿ ಮರುಪರೀಕ್ಷೆ ನಿಗದಿಯಾಗಿದೆ. ಕೇವಲ 20 ದಿನದಲ್ಲಿ ಓದಿ PSI ಪರೀಕ್ಷೆ ಎದುರಿಸುವುದು ಕಷ್ಟದ‌ ಕೆಲಸ. ಪರೀಕ್ಷೆ ಎದುರಿಸಲು ಕನಿಷ್ಠ 3 ತಿಂಗಳಾದರೂ ಬೇಕು. ಹೀಗಾಗಿ ಮರುಪರೀಕ್ಷೆ ದಿನಾಂಕವನ್ನ ಮುಂದೂಡಲು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿಎಂಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ನಾಲ್ಕು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರ್ತೀವಿ: AICC ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ

ಅಭ್ಯರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮರುಪರೀಕ್ಷೆ ದಿನಾಂಕ ಮುಂದೂಡಲು ಮನವಿ ಮಾಡಿದ್ದಾರೆ. ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನಲೆಯಲ್ಲಿ ಮರುಪರೀಕ್ಷೆಗೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ರಾಜ್ಯಾದ್ಯಂತ 55 ಸಾವಿರ ಅಭ್ಯರ್ಥಿಗಳು ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದರು.

RELATED ARTICLES

Related Articles

TRENDING ARTICLES