Sunday, May 5, 2024

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಸೌಲಭ್ಯಕ್ಕಾಗಿ ನೋಂದಾಯಿಸಿ ಸೂಚನೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆ: ತೋಟಗಾರಿಕೆ ಇಲಾಖೆಯು 2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ವಾಣಿಜ್ಯ ಹೂವಿನ ರಫ್ತಿಗಾಗಿ ತಳಿಗಳ ಕೊರತೆ ನಿವಾರಿಸಲು ಆಮದಿಗಾಗಿ ಪ್ರೋತ್ಸಾಹ ಕಾರ್ಯಕ್ರಮ ಹಮ್ಮಿಕೊಂಡಿದೆ.

ಉತ್ಕೃಷ್ಟ ಗುಣಮಟ್ಟದ ಜಾಗತಿಕ ತಳಿಗಳನ್ನು ಪರಿಚಯಿಸಿ (ಆಮದು) ಮತ್ತು ಅವುಗಳ ರಫ್ತುನ್ನು ಉತ್ತೇಜಿಸುವುದು, ರೈತರ ಆದಾಯವನ್ನು ಅಧಿಕಗೊಳಿಸುವುದು, ಸ್ಥಳೀಯ/ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಒದಗಿಸುವುದು, ರಫ್ತು ಆಧಾರಿತ ವಿವಿಧ ವಾಣಿಜ್ಯ ತಳಿಗಳ ಪ್ರದೇಶವನ್ನು ಹೆಚ್ಚಿಸುವುದು, ಹೊಸ ಪುಷ್ಪ ಬೆಳೆ/ತಳಿಗಳನ್ನು ಪರಿಚಯಿಸಲು ಸಸ್ಯಾಭಿವೃದ್ಧಿ ಅವಕಾಶಗಳ ಬಗ್ಗೆ ವಿದೇಶಗಳಿಗೆ ಅಧ್ಯಯನ ಪ್ರವಾಸಕ್ಕಾಗಿ ಅಧ್ಯಯನ ಮಾಡುವುದು ಯೋಜನೆಯ ಉದ್ದೇಶವಾಗಿದೆ.

ಇದನ್ನೂ ಓದಿ: ಸೇವಾದಳದ ತ್ಯಾಗ ಬಲಿದಾನ ಸ್ಮರಿಸಿ ಹುತಾತ್ಮರಿಗೆ ವಂದನೆ ಸಲ್ಲಿಸಿದ ಸಿಎಂ

2023-24 ನೇ ಸಾಲಿನ ಮಾರ್ಗಸೂಚಿಯಂತೆ ಸಾಮಾನ್ಯ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಣ್ಣ ಅತೀ ಸಣ್ಣ ರೈತರಿಗೆ ಹಾಗೂ ಮಹಿಳೆಯರಿಗೆ ಶೇ.50 ರಂತೆ ಗರಿಷ್ಠ ರೂ.4.00 ಲಕ್ಷಗಳಿಗೆ ಮೀರದಂತೆ ಕನಿಷ್ಟ 10 ಗುಂಟೆ ಪ್ರದೇಶದಲ್ಲಿ ಅನುಷ್ಟಾನಗೊಳಿಸಲು ಸಹಾಯಧನ ಪಡೆಯಲು ಈ ಕೂಡಲೇ ತಮ್ಮ ಹೆಸರನ್ನು ಆಯಾ ತಾಲ್ಲೂಕಿನ ತೋಟಗಾರಿಕೆ ಕಛೇರಿಗಳಲ್ಲಿ ನವೆಂಬರ್ 20 ರೊಳಗೆ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸುವುದು.

ಮಲ್ಲಿಕಾರ್ಜುನ ಬಾಬು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ದೇವನಹಳ್ಳಿ-(ಮೊ) 9480461234. ಎಂ.ಎಸ್.ದೀಪಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ದೊಡ್ಡಬಳ್ಳಾಪುರ-(ಮೊ)9880210892. ರೇಖಾ ಬಿ.ಪಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಹೊಸಕೋಟೆ- (ಮೊ)8217210320. ಹರೀಶ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ನೆಲಮಂಗಲ-(ಮೊ) 9880461607 ಅವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಗುಣವಂತ.ಜೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES