Wednesday, May 1, 2024

ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್​ಗೆ ಯುವಕ ಹೃದಯಾಘಾತದಿಂದ ಸಾವು

ಕೊಪ್ಪಳ : ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್​ಗೆ ಬಿಂದಾಸ್​ ಆಗಿಯೇ ನೃತ್ಯ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.

ಸುದೀಪ್ ಸಜ್ಜನ್ (30) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ ಯುವಕ. ಇಂದು ಬೆಳಗ್ಗೆ ಗಣೇಶ ವಿಸರ್ಜನೆ ವೇಳೆ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾನೆ.

ಗಂಗಾವತಿಯ ಪ್ರಶಾಂತ ನಗರದ ಯುವಕರಿಂದ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. 21 ದಿನದ ಗಣೇಶ ವಿಸರ್ಜನೆಯನ್ನು ಆಯೋಜನೆ ಮಾಡಲಾಗಿತ್ತು. ಗಣೇಶೋತ್ಸದಲ್ಲಿ ಡಿಜೆ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆ ಸಾಗುತ್ತಿದ್ದ ವೇಳೆ ಯುವಕ ಸುದೀಪ್ ಡ್ಯಾನ್ಸ್ ಮಾಡುತ್ತಿದ್ದನು. ಡಿಜೆ ಸೌಂಡ್​ಗೆ ಯುವಕನಿಗೆ ಹೃದಯಾಘಾತವಾಗಿದೆ.

ಡಿಜೆ ವಶಕ್ಕೆ ಪಡೆದ ಪೊಲೀಸರು

ಘಟನೆಯಿಂದ ಸ್ವಯಂ ಪ್ರೇರಿತವಾಗಿ ಯುವಕರು ಅರ್ಧಕ್ಕೆ ಡಿಜೆ ಬಂದ್ ಮಾಡಿದ್ದಾರೆ. ಯುವಕನ ಮೃತ ದೇಹವನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಂಗಾವತಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಡಿಜೆಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES